ಮಳೆ ಹಿನ್ನಲೆ ಉತ್ತರ ಕನ್ನಡ ಜಿಲ್ಲೆಯ ಜೂನ್ 25ರಂದು 4 ತಾಲೂಕಿನ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಯಲ್ಲಾಪುರ, ಹಳಿಯಾಳ, ಜೊಯಿಡಾ, ದಾಂಡೇಲಿ ತಾಲೂಕಿನ ಶಾಲೆಗಳಿಗೆ ರಜೆ ನಿಯಮ ಅನ್ವಯವಾಗಲಿದೆ. ಮಲೆನಾಡು ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿಯುವುದನ್ನು ಗಮನಿಸಿ ಈ ರಜೆ ನೀಡಲಾಗಿದೆ. ಅಂಗನವಾಡಿ ಹಾಗೂ ಪ್ರೌಢಶಾಲೆಗಳಿಗೆ ಈ ರಜೆ ಸಿಕ್ಕಿದೆ.
ಹವಾಮಾನ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಘಟಕ ಮಳೆ ಬರುವ ಬಗ್ಗೆ ಮಾಹಿತಿ ನೀಡಿದೆ.ಕರಾವಳಿ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಇರುವುದರಿಂದ ಅಲ್ಲಿನ ಶಾಲೆಗಳಿಗೆ ರಜೆ ಇಲ್ಲ. ಕಾಲೇಜುಗಳಿಗೆ ಸಹ ಈ ರಜೆ ಇಲ್ಲ.
ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಿ ರಜೆ ಆದೇಶ ಹೊರಡಿಸಲಾಗಿದ್ದು, ರಜೆ ಅವಧಿಯ ಪಾಠವನ್ನು ಬೇಸಿಗೆ ಅವಧಿಯಲ್ಲಿ ಸರಿದೂಗಿಸಲು ಸೂಚಿಸಲಾಗಿದೆ. ಶರಸಿ, ಸಿದ್ದಾಪುರ, ಮುಂಡಗೋಡು ತಾಲೂಕಿನ ಶಾಲೆಗಳಿಗೆ ಸಹ ರಜೆ ಇಲ್ಲ.
Discussion about this post