ಹುಬ್ಬಳ್ಳಿ ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ಅರಬೈಲ್ ಘಟ್ಟದಲ್ಲಿ ಬುಧವಾರ ಬೆಳಗ್ಗೆ ಲಾರಿ-ಬಸ್ಸಿನ ನಡುವೆ ಅಪಘಾತವಾಗಿದೆ. ಅಪಘಾತದ ರಭಸಕ್ಕೆ ಎರಡು ವಾಹನಗಳು ಪಲ್ಟಿಯಾಗಿದ್ದು, ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಖಾಸಗಿ ಬಸ್ಸು ಬೆಂಗಳೂರಿನಿoದ ಗೋವಾಗೆ ಹೋಗುತ್ತಿತ್ತು. ಈ ಬಸ್ಸಿನಲ್ಲಿ ಯಲ್ಲಾಪುರ, ಅಂಕೋಲಾ, ಕಾರವಾರಕ್ಕೆ ತೆರಳಬೇಕಿದ್ದ ಪ್ರಯಾಣಿಕರಿದ್ದರು. ಕೆಲವರು ಗೋವಾ ಪ್ರವಾಸಕ್ಕೆ ಹೊರಟಿದ್ದರು. ಈ ಬಸ್ಸು ಅರಬೈಲ್ ಘಟ್ಟದ ಇಳಿಜಾರಿನಲ್ಲಿ ವೇಗಪಡೆದಿದ್ದು, ಎದುರಿನಿಂದ ಬಂದ ಲಾರಿಗೆ ಡಿಕ್ಕಿಯಾಯಿತು.
ಪರಿಣಾಮ ಬಸ್ಸು ಹೆದ್ದಾರಿಯಲ್ಲಿಯೇ ಉರುಳಿ ಬಿದ್ದಿತು. ಲಾರಿ ಪ್ರಪಾತದ ಕಡೆ ಮುಖ ಮಾಡಿತು. ಲಾರಿ ಹಿಂಬಾಗ ಮಾತ್ರ ಮೇಲ್ಬಾಗದಲ್ಲಿದ್ದು, ಅಪಾಯದ ಸನ್ನಿವೇಶ ಹೆಚ್ಚಿತ್ತು. ಅದಾಗಿಯೂ ಲಾರಿ ಚಾಲಕ ರಸ್ತೆಗೆ ಹಾರಿ ಪ್ರಾಣ ಉಳಿಸಿಕೊಂಡರು. ಬಸ್ಸಿನಲ್ಲಿ ಸಹ 25 ಪ್ರಯಾಣಿಕರಿದ್ದು, ಎಲ್ಲರೂ ಸುರಕ್ಷಿತವಾಗಿ ಬಸ್ಸಿನಿಂದ ಹೊರಬಿದ್ದರು.
ಎರಡೂ ವಾಹನಗಳು ಪಕ್ಕದ ಪ್ರಪಾತದಲ್ಲಿ ಬಿದ್ದರೆ ನೂರಾರು ಅಡಿಗಳಷ್ಟು ಕೆಳಕ್ಕೆ ಹೋಗುವುವ ಸಾಧ್ಯತೆಯಿದ್ದು, ಭಾರೀ ಪ್ರಮಾಣದ ಅನಾಹುತದಿಂದ ಪ್ರಯಾಣಿಕರೆಲ್ಲರೂ ತಪ್ಪಿಸಿಕೊಂಡರು.
