ಆಧಾರ್ ಕಾರ್ಡ ಜೊತೆ ಭೂಮಿಯ ದಾಖಲೆಗಳನ್ನು ಡುಪ್ಲಿಕೇಟ್ ಮಾಡುತ್ತಿದ್ದ ಮಹಿಳೆಯರನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರಿನ ಕಡಬ ಮೂಲದ ಪಿಸಿ ಅಲೈಸ್ ಕುರಿಯನ್ ಎಂಬಾತರು ನಕಲಿ ದಾಖಲೆ ನೀಡಿ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದರು. ಜಿಲ್ಲಾ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ್ ಅವರು ನಕಲಿ ದಾಖಲೆಗಳನ್ನು ಪತ್ತೆ ಮಾಡಿದರು. ಬೇರೆ ಬೇರೆ ಕಡೆಯೂ ಇದೇ ರೀತಿ ವಂಚನೆ ಮಾಡಿದ ಬಗ್ಗೆ ತನಿಖೆ ನಡೆಯುತ್ತಿದೆ.
ಶಿರಸಿಯಲ್ಲಿ ಈಚೆಗೆ ನಡೆದ ಗಾಂಜಾ ಪ್ರಕರಣದ ಆರೋಪಿಗಳಿಗೆ ಜಾಮೀನು ಕೊಡಿಸಲು ಆ ಮಹಿಳೆ ಬಂದಿದ್ದರು. ಅನುಮಾನದ ಮೇರೆಗೆ ದಾಖಲೆ ಪರಿಶೀಲಿಸಿದಾಗ ಅಕ್ರಮ ನಡೆಸಿರುವುದು ಗೊತ್ತಾಯಿತು. ಒಟ್ಟು ಎಂಟು ಕಡೆ ಇದೇ ರೀತಿ ವಂಚಿಸುತ್ತಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ಪೊಲೀಸರು ಆ ಮಹಿಳೆಯನ್ನು ವಶಕ್ಕೆಪಡೆದರು.
ಆ ಮಹಿಳೆ ಜೊತೆ ಇನ್ನಿಬ್ಬರು ವ್ಯಕ್ತಿಗಳು ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನವಿದೆ. ಆ ಇಬ್ಬರು ನ್ಯಾಯಾಲಯದ ಆವಾರದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ರವೀಂದ್ರ ನಾಯ್ಕ ಅವರು ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಕಲಿ ದಾಖಲೆಗಳನ್ನು ನೀಡಿದ ಮಹಿಳೆಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಅಲ್ಲದೆ, ಈ ನಕಲಿ ದಾಖಲೆಗಳ ಜಾಲವನ್ನು ಸಂಪೂರ್ಣವಾಗಿ ಪತ್ತೆ ಹಚ್ಚುವಂತೆ ನ್ಯಾಯಾಧೀಶರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
