ಮುರುಡೇಶ್ವರದ ಜನತಾ ವಿದ್ಯಾಲಯದ ಮುಂದಿನ `ನಾಯಕ್ ರೆಸಿಡೆನ್ಸಿ’ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಆಗ ಅಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಕಲ್ಕತ್ತಾ ಮೂಲದ ಮಹಿಳೆಯೊಬ್ಬರು ಆರ್ಥಿಕ ಸಮಸ್ಯೆಯಲ್ಲಿದ್ದರು. ಬೆಂಗಳೂರಿನಲ್ಲಿದ್ದ ಆ ಮಹಿಳೆಯನ್ನು ಪರಿಚಯಿಸಿಕೊಂಡ ಸಿದ್ದಾಪುರದ ಗಣೇಶ ನಾಯ್ಕ ಎಂಬಾತರು ಅವರನ್ನು ಮುರುಡೇಶ್ವರಕ್ಕೆ ಕರೆತಂದಿದ್ದರು. ಆ ಮಹಿಳೆಗೆ ಹಣದ ಆಮೀಷವೊಡ್ಡಿ ವೇಶ್ಯಾವಾಟಿಕೆಗೆ ದೂಡಿದ್ದರು.
ಗಣೇಶ ನಾಯ್ಕ ಅವರ ಮಾತಿಗೆ ಒಪ್ಪಿದ ಆ ಮಹಿಳೆ ಮುರುಡೇಶ್ವರದ ವಿನಾಯಕ ನಾಯ್ಕ ಅವರ ನಾಯಕ್ ರೆಸಿಡೆನ್ಸಿಯಲ್ಲಿ ತಂಗಿದ್ದರು. ಗಣೇಶ ನಾಯ್ಕ, ವಿನಾಯಕ ನಾಯ್ಕ ಹಾಗೂ ಆ ಲಾಡ್ಜಿನ ಸಿಬ್ಬಂದಿ ಆಕಾಶ ಮುರುಡೇಶ್ವರ ಸೇರಿ ಆ ಮಹಿಳೆಯನ್ನು ಮುಂದೆ ಮಾಡಿ ದುಡ್ಡು ಮಾಡಿಕೊಳ್ಳುತ್ತಿದ್ದರು. ಮುರುಡೇಶ್ವರ ಪಿಎಸ್‌ಐ ಹಣಮಂತ ಬೀರಾದರ್ ಅವರಿಗೆ ಈ ವಿಷಯ ಗೊತ್ತಾಯಿತು.
ತಮ್ಮ ಜೀಪಿನಲ್ಲಿ ಪೊಲೀಸ್ ಸಿಬ್ಬಂದಿ ಜೊತೆ ಹಣಮಂತ ಬೀರಾದರ್ ಅವರು ಲಾಡ್ಜಿಗೆ ಹೋದರು. ಅಲ್ಲಿ ಆ ಮಹಿಳೆ ಜೊತೆ ಈ ಮೂವರು ಸಿಕ್ಕಿಬಿದ್ದರು. ಸಂತ್ರಸ್ತ ಮಹಿಳೆಗೆ ಸಾಂತ್ವಾನ ಹೇಳಿ, ಮೂವರನ್ನು ಪೊಲೀಸರು ಜೈಲಿಗೆ ಕಳುಹಿಸಿದರು.
Discussion about this post