ಹೊನ್ನಾವರದಲ್ಲಿ ಮಹಿಳೆ ಸ್ನಾನ ಮಾಡುವಾಗ ಅದನ್ನು ಕದ್ದು ಮುಚ್ಚಿ ನೋಡುತ್ತಿದ್ದ ಯುವಕನನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ಅದಾದ ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೊನ್ನಾವರದ ನಾಜಗಾರದ ಯೊಗೇಶ ಗೌಡ ಎಂಬಾತರು ಮಂಕಿಯ ಮಹಿಳೆಯ ಬೆನ್ನು ಬಿದ್ದಿದ್ದರು. ಆ ಮಹಿಳೆ ಸ್ನಾನ ಮಾಡುವಾಗ ಅದನ್ನು ಇಣುಕಿ ನೋಡುವುದನ್ನು ಕಾಯಕವನ್ನಾಗಿಸಿಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಸಹ ಮಹಿಳೆಯ ಬಚ್ಚಲುಮನೆ ಪ್ರವೇಶಿಸುವ ಮುನ್ನ ಯೋಗೇಶ ಗೌಡ ಅಲ್ಲಿದ್ದರು. ಬಚ್ಚಲುಮನೆ ಪಕ್ಕ ಕೊಟ್ಟಿಗೆಯಿದ್ದು, ಅಲ್ಲಿ ಯಾರೋ ಇದ್ದ ಹಾಗೇ ಮಹಿಳೆಗೆ ಬಾಸವಾಯಿತು. ಹತ್ತಿರ ಹೋಗಿ ನೋಡಿದಾಗ ಯೋಗೇಶ ಗೌಡ ಸಿಕ್ಕಿ ಬಿದ್ದರು.
ಮಹಿಳೆ ಜೋರಾಗಿ ಬೊಬ್ಬೆ ಹೊಡೆದಿದ್ದು, ಆಗ ಇನ್ನಷ್ಟು ಜನ ಆಗಮಿಸಿ ಯೋಗೇಶ ಗೌಡರನ್ನು ಹಿಡಿದುಕೊಂಡರು. ಮರ್ಯಾದೆ ಪ್ರಶ್ನೆಯಿಂದ ಮಹಿಳೆ ಮೊದಲು ಈ ವಿಷಯ ಬಹಿರಂಗಪಡಿಸಿರಲಿಲ್ಲ. ಆದರೆ, ಶುಕ್ರವಾರದ ವಿದ್ಯಾಮನ ವಿಕೋಪಕ್ಕೆ ತೆರಳಿದ ಕಾರಣ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದರು.
ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
Discussion about this post