ಕಳೆದ ರಾಮ ನವಮಿ ದಿನ ಶಿರಸಿಯ ರಾಯರಪೇಟೆಯ ವಿಷ್ಣುಮಠದಲ್ಲಿ ರಾಮ ಮಂತ್ರದ ಜಪ ಶುರುವಾಗಿದ್ದು, ಭಕ್ತರು ಶನಿವಾರದವರೆಗೆ 21 ಕೋಟಿ ಜಪವಾಗಿದೆ.
ಪರ್ತಗಾಳಿ ಮಠಕ್ಕೆ 550 ವರ್ಷ ತುಂಬಿದ ಹಿನ್ನಲೆ 550 ಕೋಟಿ ರಾಮ ಜನ ಮಾಡಲು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಸಂಕಲ್ಪಿಸಿದ್ದರು. ಅವರ ಆಜ್ಞೆಯಂತೆ ಎಲ್ಲಡೆ ರಾಮ ಜಪ ಶುರುವಾಯಿತು. ಶಿರಸಿಯ 8 ಕೇಂದ್ರದಲ್ಲಿ ಸಹ ಭಕ್ತರು ರಾಮ ಜಪ ಮಾಡುತ್ತಿದ್ದು, ಶನಿವಾರ ಅದು 21 ಕೋಟಿಯಷ್ಟಾಗಿದೆ. ಹೀಗಾಗಿ ಧಾರ್ಮಿಕ ಕ್ಷೇತ್ರದಲ್ಲಿ ಇದೊಂದು ಮಹತ್ತರ ಸಾಧನೆಯಾಗಿದೆ.
ಪ್ರತಿ ದಿನ ಬೆಳಗ್ಗೆ 7.30ರಿಂದ ರಾಯರಪೇಟೆಯ ವಿಷ್ಣುಮಠದಲ್ಲಿ ರಾಮ ಮಂತ್ರದ ಜಪ ಶುರುವಾಗುತ್ತದೆ. 40ರಿಂದ 50 ಭಕ್ತರು ಒಂದು ತಾಸುಗಳ ಕಾಲ ಜಪ ಮಾಡುತ್ತಾರೆ. ಅದಾದ ನಂತರ ಸಂಜೆ 5ರಿಂದ ರಾತ್ರಿ 10.30ರವರೆಗೂ ಮತ್ತೆ ಅಲ್ಲಿ ಜಪ ಕೇಳಿಸುತ್ತದೆ. ಆಗ ಎರಡು ಗುಂಪುಗಳಲ್ಲಿ ತಲಾ 125ರಂತೆ ಭಕ್ತರು ಆಗಮಿಸಿ ಜಪ ಮಾಡುತ್ತಾರೆ.
ಶಿರಸಿಯ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮುದಾಯದವರು ಅತ್ಯಂತ ಭಕ್ತಿಯಿಂದ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಮೂರು ಅವಧಿಯಲ್ಲಿ ನಡೆಯುವ ರಾಮ ಜಪವನ್ನು ಜಿಎಸ್‌ಬಿ ಸಮುದಾಯದವರು ದೈನಿಂದಿನದ ಭಾಗವಾಗಿ ರೂಢಿಸಿಕೊಂಡಿದ್ದು ಇಲ್ಲಿನ ವಿಶೇಷ. ಶ್ರೀಗಳ ಸಂಕಲ್ಪದಲ್ಲಿ ಭಕ್ತರು ಭಾಗಿಯಾಗಿದ್ದು, ಶಿರಸಿಯ ಮಟ್ಟಿಗೆ 30 ಕೋಟಿಗೂ ಅಧಿಕ ರಾಮ ಮಂತ್ರದ ಜಪ ನಡೆಯುವ ಸಾಧ್ಯತೆಯಿದೆ.
ರಾಮನಾಮ ಸ್ಮರಣೆ ಮೂಲಕ ಧಾರ್ಮಿಕ ಚೈತನ್ಯ ಉತ್ತೇಜನ, ಆಧ್ಯಾತ್ಮಿಕ ಮಾರ್ಗದರ್ಶನಕ್ಕೆ ಕಳೆದ ವರ್ಷದ ರಾಮನವಮಿ ವೇದಿಕೆಯಾಗಿದೆ. ಈ ಅಭಿಯಾನ ಸಮುದಾಯದ ಏಕತೆಯನ್ನು ಸಹ ಬಲಪಡಿಸಿದೆ.
Discussion about this post