ದೇವರ ದರ್ಶನಕ್ಕಾಗಿ ಹೊರಟಿದ್ದ ಕಾರವಾರದ ಸುರೇಶ ತಳ್ಳೇಕರ್ (65) ಅವರು ಹಳ್ಳದಲ್ಲಿ ಬಿದ್ದು ಸಾವಪ್ಪಿದ್ದಾರೆ. ಎಷ್ಟು ಹೊತ್ತಾದರೂ ಮನೆಗೆ ಬಾರದ ಕಾರಣ ಹುಡುಕಾಟ ನಡೆಸಿದಾಗ ಅವರ ಶವ ಸಿಕ್ಕಿದೆ.
ಸುರೇಶ ತಳ್ಳೇಕರ್ ಅವರು ಕಾರವಾರದ ಅಮದಳ್ಳಿಯ ಕಳಸವಾಡದಲ್ಲಿ ವಾಸವಾಗಿದ್ದರು. ಜೂನ್ 28ರ ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿದ್ದರು. ಅಮದಳ್ಳಿ ಜಟಕಾ ದೇವಸ್ಥಾನದ ಹತ್ತಿರ ಅವರು ಹೋಗುತ್ತಿರುವುದನ್ನು ಜನ ಕೊನೆಯದಾಗಿ ನೋಡಿದ್ದರು.
ಅಲ್ಲಿನ ಕೊಂಕಣ ರೈಲ್ವೆ ಸೇತುವೆ ಕೆಳಗಿನ ಹಳ್ಳದಲ್ಲಿ ಆಕಸ್ಮಿಕವಾಗಿ ಸುರೇಶ ತಳ್ಳೇಕರ್ ಬಿದ್ದರು. ನೀರಿನಲ್ಲಿ ಕೊಚ್ಚಿ ಹೋದ ಅವರು ಆ ವೇಳೆ ಯಾರ ಕಣ್ಣಿಗೂ ಕಾಣಲಿಲ್ಲ. ರಾತ್ರಿ 8 ಗಂಟೆಯಾದರೂ ಸುರೇಶ ಅವರು ಮನೆಗೆ ಬಾರದ ಕಾರಣ ಹುಡುಕಾಟ ಶುರುವಾಯಿತು.
ರಾತ್ರಿ ಆ ಹಳ್ಳದಲ್ಲಿಯೇ ಅವರ ಶವ ಸಿಕ್ಕಿತು. ಪೊಲೀಸರು ಬಂದು ಪರಿಶೀಲನೆ ನಡೆಸಿದರು. ಸಾಗರ ತಳೇಕರ್ ನೀಡಿದ ದೂರಿನ ಅನ್ವಯ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
