ಶಿರಸಿಯ ಪ್ರಸಿದ್ಧ ಆಯುರ್ವೇದ ತಜ್ಞ ಡಾ ಅರವಿಂದ ಪಟವರ್ಧನ್ ಅವರು ಸೋಮವಾರ ಸಾವನಪ್ಪಿದ್ದಾರೆ. ಈ ದಿನ ಅವರು ತಮ್ಮ 87ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದು, ಅದೇ ದಿನ ಅವರು ಕುಟುಂಬವನ್ನು ಶೋಕ ಸಾಗರಲ್ಲಿ ಮುಳುಗಿಸಿದ್ದಾರೆ.
ವೈದ್ಯ ಕುಟುಂಬದ ಹಿನ್ನಲೆ ಹೊಂದಿದ ಡಾ ಅರವಿಂದ ಪಟವರ್ಧನ್ ಅವರು ಶಿರಸಿಯಲ್ಲಿ ಮೊದಲ ಬಿಎಎಂಎಸ್ ವೈದ್ಯ ಎಂದು ಪ್ರಸಿದ್ಧಿಪಡೆದಿದ್ದರು. ಅನೇಕ ವರ್ಷಗಳ ಕಾಲ ಅವರು ರೋಗಿಗಳ ಆರೈಕೆ ಮಾಡಿದ್ದರು. ಗಿಡ ಮೂಲಿಕೆಗಳು ಹಾಗೂ ಅವುಗಳಲ್ಲಿರುವ ರೋಗ ನಿರೋಧಕ ಶಕ್ತಿಯ ಬಗ್ಗೆ ಅಪಾರ ಅಧ್ಯಯನ ಮಾಡಿದ್ದರು.
ದೂರ ದೂರದ ಊರುಗಳಿಗೆ ಸೈಕಲ್ ಹಾಗೂ ಎತ್ತಿನಗಾಡಿಗಳ ಮೂಲಕ ಚಲಿಸಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ಜೀವನದಲ್ಲಿ ಅತ್ಯಂತ ಶಿಸ್ತು ಹಾಗೂ ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಅವರು ಕೊನೆ ಕ್ಷಣದವರೆಗೂ ಹಾಗೇ ಬದುಕಿದ್ದರು. ಮಕ್ಕಳಲ್ಲಿಯೂ ಅವರು ಶಿಸ್ತು, ಸಂಯಮವನ್ನು ಬೆಳೆಸಿದ್ದರು.
ಡಾ ಅರವಿಂದ ಪಟವರ್ಧನ್ ಅವರ ಪುತ್ರ ಡಾ ರವಿಕಿರಣ ಪಟವರ್ಧನ್ ಅವರು ಶಿರಸಿಯಲ್ಲಿ ಆಯುರ್ವೇದ ವೈದ್ಯರಾಗಿದ್ದಾರೆ. ಜೊತೆಗೆ ತಂದೆ ನಡೆದ ದಾರಿಯಲ್ಲಿಯೇ ನಡೆಯುತ್ತಿರುವ ಅವರು ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.
Discussion about this post