ಶಿರಸಿಯ ಸ್ಕೋಡ್‌ವೆಸ್ ಸಂಸ್ಥೆಯವರು ಗುಜರಾತಿನ ದೇಸಾಯಿ ಪೌಂಡೇಶನ್ ಸಹಯೋಗದಲ್ಲಿ ಕಾರವಾರದ ಅಸ್ನೋಟಿ ಶಿವಾಜಿ ಶಾಲೆಯ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಜೊತೆಗೆ ಶುಚಿತ್ವ ಕಾಪಾಡಿಕೊಳ್ಳುವಿಕೆ, ಯೋಗ-ಪ್ರಾಣಾಯಾಮದ ಮಹತ್ವ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಳದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದ್ದಾರೆ.
ಕೆಪಿಸಿಸಿ ರಾಜ್ಯಪ್ರಧಾನ ಕಾರ್ಯದರ್ಶಿಗಳಾದ ಆಫ್ರೀನ್ ಅಲಿ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. `ಆರೋಗ್ಯವೇ ಭಾಗ್ಯ’ ಎಂದು ಪುನರುಚ್ಚರಿಸಿದ ಅವರು ಸ್ಕೋಡವೇಸ್ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. `ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರ ಆಯೋಜಿಸುವವರ ಸಂಖ್ಯೆ ಈಚೆಗೆ ಕಡಿಮೆಯಾಗಿದೆ. ಅಂಥಹುದರಲ್ಲಿ ಅಸ್ನೋಟಿ ಶಾಲೆಯ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುತ್ತಿರುವದು ಉತ್ತಮ ಸಂಗತಿ’ ಎಂದವರು ಅಭಿಪ್ರಾಯಪಟ್ಟರು.
ಅಸ್ನೋಟಿ ಶಿವಾಜಿ ವಿದ್ಯಾ ಮಂದಿರದ ಮುಖ್ಯಾಧ್ಯಪಕ ಗಣೇಶ ಬಿಷ್ಟಣ್ಣನವರ ಮಾತನಾಡಿ `ಗುಡ್ಡಗಾಡು ಮತ್ತು ಹಿಂದುಳಿದ ಪ್ರದೇಶಗಳ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದಲ್ಲದೇ ಅಗತ್ಯ ಔಷಧಿಯನ್ನು ನೀಡುರುವುದರಿಂದ ಸಹಕಾರಿಯಾಗಿದೆ. ಸೇವಾ ಸಂಸ್ಥೆಯ ಕಾರ್ಯ ನಿರಂತರವಾಗಿರಲಿ’ ಎಂದು ಹಾರೈಸಿದರು. ಕೆಡಿಪಿ ಸದಸ್ಯ ಸುರೇಶ ಅಸ್ನೋಟಕರ ಹಾಗೂ ವೈದ್ಯ ಡಾ ಪ್ರಜ್ಯೋತ ಡಿಚೋಲ್ಕರ್, ಕಾರವಾರ ತಾಲೂಕಿನ ಸ್ಕೋಡವೇಸ್ ಸಂಸ್ಥೆಯ ಸಂಯೋಜಕಿ ರೇಷ್ಮಾ ಹರಿಕಂತ್ರ, ಪ್ರಮುಖರಾದ ಅಮುದಾ ಎನ್ ಸ್ವಾಮಿ, ಸತೀಶ್ ನಾಯ್ಕ, ರೂಪಾ ತಳವಾರ ಹಾಜರಿದ್ದರು.
ಡಾ ಪ್ರಜ್ಯೋತ್ ಡಿಚೋಲ್ಕರ್ ಅವರು ಆತ್ಮೀಯವಾಗಿ ಮಕ್ಕಳನ್ನು ಮಾತನಾಡಿಸಿ ಆರೋಗ್ಯ ತಪಾಸಣೆ ನಡೆಸಿದರು. ರೇಷ್ಮಾ ಹರಕಂತ್ರ ಮತ್ತು ಅಮುದಾ ಸ್ವಾಮಿ ಅವರು ಹಿಮೋಗ್ಲೋಬಿನ್ ಪರೀಕ್ಷೆ ಮಾಡಿದರು. 175 ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಸ್ಕೋಡವೇಸ್ ಸಂಸ್ಥೆಯ ಸಮನ್ವಯಾಧಿಕಾರಿ ಶರತ್ ನಾಯ್ಕ ಅವರು ಕಾರ್ಯಕ್ರಮದ ಜವಾಬ್ದಾರಿ ನಿಭಾಯಿಸಿದರು.
Discussion about this post