• Latest
Home Industry: The price is not expensive.. There is no compromise on quality!

ಗೃಹ ಕೈಗಾರಿಕೆ: ದರ ದುಬಾರಿಯಲ್ಲ.. ಗುಣಮಟ್ಟದಲ್ಲಿ ರಾಜಿ ಇಲ್ಲ!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಗೃಹ ಕೈಗಾರಿಕೆ: ದರ ದುಬಾರಿಯಲ್ಲ.. ಗುಣಮಟ್ಟದಲ್ಲಿ ರಾಜಿ ಇಲ್ಲ!

ಪೇಟೆಯಿಂದ ಖರೀದಿಸಿ ತಂದ ಸಾಬೂನು ಎಂದರೆ ಕೆಲವರಿಗೆ ಅಲರ್ಜಿ. ದುಬಾರಿ ಬೆಲಯ ಉದಬತ್ತಿಗಳಿಂದಲೂ ಅನೇಕರು ದೂರ. ಪಾತ್ರೆ ತೊಳೆಯಲು ಬಳಸುವ ದೃವ, ಫಿನಾಯಲ್ ಸೇರಿ ಹಲವು ವಸ್ತುಗಳನ್ನು ಕಮಲಾ ಪೂಜಾರಿ ಅವರು ಮನೆಯಲ್ಲಿ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದು, ಅದು ನಿಮಗೂ-ನಿಮ್ಮ ಕುಟುಂಬದವರಿಗೂ ಉಪಯುಕ್ತವಾಗುವುದರಲ್ಲಿ ಅನುಮಾನವಿಲ್ಲ.

uknews9.comby uknews9.com
in ವಾಣಿಜ್ಯ
Home Industry: The price is not expensive.. There is no compromise on quality!
ADVERTISEMENT

ಆಲೋವೆರಾ, ತೆಂಗಿನ ಎಣ್ಣೆ ಮೊದಲಾದ ವಸ್ತುಗಳನ್ನು ಬಳಸಿ ಕಮಲಾ ಪೂಜಾರಿ ಅವರು ಸಾಬೂನು ಸಿದ್ದಪಡಿಸುತ್ತಾರೆ. ಊರಿನಿಂದ ಊರಿಗೆ ಅಲೆದಾಡಿ ಅವುಗಳನ್ನು ಅವರು ಮಾರಾಟ ಮಾಡುತ್ತಾರೆ. ಮನೆಯಲ್ಲಿಯೇ ತಯಾರಾಗುವ ಈ ಸಾಬೂನು ದರ ದುಬಾರಿ ಅಲ್ಲ. ಗುಣಮಟ್ಟದಲ್ಲಿಯೂ ಅವರು ರಾಜಿ ಮಾಡಿಕೊಂಡಿಲ್ಲ!

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಯಲ್ಲಾಪುರ ತಾಲೂಕಿನ ಮಂಚಿಕೇರಿ ಬಳಿಯ ಬೈಚಗೋಡದಲ್ಲಿ ಕಮಲಾ ಪೂಜಾರಿ ಅವರು ವಾಸವಾಗಿದ್ದಾರೆ. ಮೊದಲು ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಕಳೆದ ನಾಲ್ಕು ವರ್ಷಗಳಿಂದ ಗೃಹ ಕೈಗಾರಿಕೆಯತ್ತ ಒಲವು ತೋರಿದ್ದು, ಸದ್ಯ ಮನೆಯಲ್ಲಿಯೇ ಉದಬತ್ತಿ, ಸಾಬೂನು, ಫಿನಾಯಲ್ ಸೇರಿ ವಿವಿಧ ವಸ್ತುಗಳನ್ನು ತಯಾರಿಸುತ್ತಾರೆ.

ADVERTISEMENT

ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಲ್ಲಿ ಕಮಲಾ ಪೂಜಾರಿ ಅವರು ಒಂದು ದಿನದ ಕರಕುಶಲ ತಯಾರಿಕೆ ತರಬೇತಿಪಡೆದಿದ್ದರು. ಅದಾದ ನಂತರ ಒಂದು ಸಾವಿರ ರೂ ಹಣ ನೀಡಿ ಶಿರಸಿಯ ವಿವೇಕಾನಂದ ರಾಯ್ಕರ್ ಅವರ ಬಳಿ ತರಬೇತಿಪಡೆದರು. ಅದಾದ ಮೇಲೆ ಶಿರಸಿಯ ಪೂಜಾ ಅಸೋಶಿಯೇಟ್ಸ್ ಮೂಲಕ ಕಚ್ಚಾ ವಸ್ತುಗಳನ್ನು ತಂದು ಮನೆಯಲ್ಲಿ ಕೆಲಸ ಶುರು ಮಾಡಿದರು.

ಮನೆ ಸುತ್ತಮುತ್ತಲಿನ ಕೆಲವರಿಗೆ ಮೊದಲು ಆ ಉತ್ಪನ್ನಗಳನ್ನು ಮಾರಾಟ ಮಾಡಿದರು. ಅದಾದ ನಂತರ ಮಂಚಿಕೇರಿ-ಉಮ್ಮಚ್ಗಿ ಮೊದಲಾದ ಕಡೆ ತೆರಳಿ ಮಾರಾಟ ಶುರು ಮಾಡಿದರು. ಬಿಡುವಿನ ವೇಳೆ ಉತ್ಪನ್ನ ತಯಾರಿಕೆ ಹಾಗೂ ಉಳಿದ ದಿನಗಳಲ್ಲಿ ಮನೆ ಮನೆ ತಿರುಗಿ ಉತ್ಪನ್ನ ಮಾರಾಟ ಮಾಡುವುದನ್ನು ಅವರು ಕಾಯಕವನ್ನಾಗಿಸಿಕೊಂಡರು.

ಸಿದ್ದಪಡಿಸಿದ ಉತ್ಪನ್ನಗಳನ್ನು ಅವರು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಿಲ್ಲ. ಅದಾಗಿಯೂ ಗುಣಮಟ್ಟದ ವಸ್ತುಗಳನ್ನು ಖರೀದಿಸಿದ ಜನ ಮನೆಗೆ ಆಗಮಿಸಿ ಸಾಬೂನು-ಉದಬತ್ತಿ ಖರೀದಿಸಿದರು. ದಿನದಿಂದ ದಿನಕ್ಕೆ ಕಮಲಾ ಪೂಜಾರಿ ಅವರು ನಡೆಸುತ್ತಿರುವ ಮಾರುಕಟ್ಟೆ ವಿಸ್ತಾರವಾಗುತ್ತಿದ್ದು, ತಾವು ಸಿದ್ದಪಡಿಸಿದ ಉತ್ಪನ್ನಗಳನ್ನು ಅಂಚೆ ಮೂಲಕವೂ ಅವರು ವಿವಿಧ ಊರುಗಳಿಗೆ ರವಾನಿಸಲು ಸಿದ್ಧವಾಗಿದ್ದಾರೆ. ಕಮಲಾ ಪೂಜಾರಿ ಅವರ ಪತಿ ಶ್ರೀನಿವಾಸ ಪೂಜಾರಿ ಅವರು ಈ ಉದ್ದಿಮೆಯಲ್ಲಿ ಸಹಕಾರ ನೀಡುತ್ತಿದ್ದಾರೆ.

ಮನೆಯಲ್ಲಿಯೇ ತಯಾರಿಸಿದ ನೈಸರ್ಗಿಕ ಉತ್ಪನ್ನಗಳು ನಿಮಗೂ ಅಗತ್ಯವಿದ್ದರೆ ಇಲ್ಲಿ ಫೋನ್ ಮಾಡಿ: 8431380590

#sponsored

ADVERTISEMENT

Discussion about this post

Previous Post

200ರೂ ವಂಚನೆ: 30 ವರ್ಷದ ನಂತರ ಸಿಕ್ಕಿಬಿದ್ದ ಕಳ್ಳ!

Next Post

ದೇಸಾಯಿ ಪೌಂಡೇಶನ್ ಸಹಯೋಗ: ಮಕ್ಕಳ ಆರೋಗ್ಯದ ಬಗ್ಗೆ ಸ್ಕೋಡ್‌ವೇಸ್ ಕಾಳಜಿ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋