ಕೇಂದ್ರ ಸರಕಾರವು ವಕ್ಫ್ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿರುವ ಕ್ರಮವನ್ನು ವಿರೊಧಿಸಿ ದಾಂಡೇಲಿ ನಗರದ ಹಳಿಯಾಳ ರಸ್ತೆಯಲ್ಲಿ ಅಂಜುಮನ್ ಫಲಾವುಲ್ ಮುಸ್ಲಿಮಿನ್ ಕಡೆಯಿಂದ ಪ್ರತಿಭಟನೆ ನಡೆದಿದೆ. ಮಾನವ ಸರಪಳಿ ರಚಿಸಿ ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅಂಜುಮನ್ ಫಲಾವುಲ್ ಮುಸ್ಲಿಮಿನ್ ಅಧ್ಯಕ್ಷ ರಿಯಾಜ ಬಾಬು ಸಯ್ಯದ್ ಅವರು `ಕೇಂದ್ರ ಸರಕಾರ ಮಾಡಲು ಉದ್ದೇಶಿಸಿರುವ ಕಾಯ್ದೆ ತಿದ್ದುಪಡಿಗೆ ನಮ್ಮ ವಿರೋಧವಿದೆ’ ಎಂದರು. `ಆಲ್ ಇಂಡಿಯಾ ಮುಸ್ಲಿಂ ಪರ್ಸ್ನಲ್ ಲಾ ಬೋರ್ಡ್ ಮತ್ತು ಕರ್ನಾಟಕ ಉಲ್ಮಾ ಜಮಾತ ಮಾರ್ಗದರ್ಶನದಲ್ಲಿ ಮಾನವ ಸರಪಳಿಯನ್ನು ಶಾಂತಿಯುತವಗಿ ಮಾಡಿ ಪ್ರತಿಭಟನೆ ವ್ಯಕ್ತ ಪಡಿಸುತ್ತಿದ್ದೇವೆ’ ಎಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ಮುಖಂಡರಾದ ಯಾಸಿರ ಸಲಿಂ ಶೇಖ, ಗೌಸ ಮಕಾಂದಾರ, ಹಫಿಜ್ ಅಬ್ದುಲ್ ಸತ್ತಾರ ಖಾಜಿ, ಅಬ್ಬಾಸ ಉಡುಪಿ, ನಾಸಿರ ಖೊತ್ವಾಲ್, ಇಮ್ತಿಯಾಜ ಶೇಖ, ಐಮುದ್ದಿನ ಶೇಖ, ಕಾಸಿಮ ಪಿರಜಾದೆ, ಜಲಾನಿ ಶೇಖ, ಅನ್ವರ ಪಠಾನ, ಫೈರೊಜ್ ಸಯ್ಯದ ಪಿರಜಾದೆ, ಮುಸ್ತಾಕ ಶೇಖ, ಮೆಹಬುಬ ಸುಬಾನಿ, ಅಸ್ಲಮ್ ಐ. ಸನದಿ, ಮುಸ್ತಫಾ ಕಿತ್ತೂರ, ಅಬ್ಬು ತಾಹಿರ ನುರಜಿ ನಾಯ್ಕ, ಫರುಮಿಯಾ, ಹಫಿಜ ಅಕ್ಲಕ್ ಸಂಗೊಳಿ, ಅಸ್ಲಮ ಬೆಲಗಾಮಿ ಇತರರಿದ್ದರು.
