ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಪಿಐ ಶಶಿಕಾಂತ ವರ್ಮಾ ಸೇರಿ ಶಿರಸಿ ಪಟ್ಟಣದಲ್ಲಿ ಬೈಕ್ ಕದ್ದಿದ್ದ ಕಳ್ಳನನ್ನು ಹಿಡಿದಿದ್ದಾರೆ. ಪಿಎಸ್ಐ ನಾಗಪ್ಪ, ನಾರಾಯಣ ರಾತೋಡ್ ಅವರು ಬೈಕನ್ನು ವಶಕ್ಕೆಪಡೆದು ಆ ಕಳ್ಳನನ್ನು ಜೈಲಿಗೆ ಕಳುಹಿಸಿದ್ದಾರೆ.
ಶಿರಸಿಯ ಬಿಡ್ಕಿಬೈಲ್ ಟೆಂಪೋ ನಿಲ್ದಾಣದ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನವಾದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿತ್ತು. ಹಾನಗಲ್ಲಿನ ಮನೋಜ ವಡ್ಡರ್ ಎಂಬಾತ ಬೈಕ್ ಕದ್ದು ಪರಾರಿಯಾಗಿದ್ದು, ರಾಜಾರೋಷವಾಗಿ ಆ ಬೈಕಿನಲ್ಲಿ ಓಡಾಡಿಕೊಂಡಿದ್ದರು. ಶಿರಸಿ ನಗರ ಪೊಲೀಸ್ ಠಾಣೆ ಸಿಬ್ಬಂದಿ ಹನುಮಂತ ಕಬಾಡಿ ಈ ವಿಷಯ ಪತ್ತೆ ಮಾಡಿದರು. ಪೊಲೀಸ್ ಸಿಬ್ಬಂದಿ ಪ್ರವೀಣ ಸಿಪಿಸಿ, ಸದ್ದಾಂ ಹುಸೇನ್, ಸುನಿಲ ಹಡಲಿಗೆ ಜೊತೆ ಸೇರಿ ಅವರು ಕಾರ್ಯಾಚರಣೆಗಿಳಿದರು.
ಕಾರವಾರ ಟೆಕ್ನಿಕಲ್ ಸೆಲ್’ನ ಉದಯ ಗುನಗಾ ಹಾಗೂ ಬಬನ್ ಕದಂ ಅವರು ಬೈಕ್ ಕಳ್ಳ ಮನೋಜ ವಡ್ಡರ್ ಇರುವ ಜಾಗ ಪತ್ತೆ ಮಾಡಿದರು. ಪೊಲೀಸರೆಲ್ಲರೂ ಸೇರಿ ಬೈಕ್ ಕಳ್ಳನನ್ನು ಬಂಧಿಸಿ, ಜೈಲಿಗೆ ಕಳುಹಿಸಿದರು.
