ಹುಬ್ಬಳ್ಳಿ ಅಂಕೋಲಾ ರಸ್ತೆಯ ಅಡ್ಡಲಾಗಿ ಯಲ್ಲಾಪುರದಲ್ಲಿ ಗುರುವಾರ ಲಾರಿ ಬಿದ್ದ ಪರಿಣಾಮ ಆ ಮಾರ್ಗದ ಪ್ರಯಾಣಿಕರು ಗಂಟೆಗಳ ಕಾಲ ಪರದಾಡಿದರು. ಅನೇಕರು ಹಳಿಯಾಳ ಮಾರ್ಗವಾಗಿ ತೆರಳಿ ಹುಬ್ಬಳ್ಳಿ ಸೇರಿದರು.
ಹುಬ್ಬಳ್ಳಿಯಿಂದ ಯಲ್ಲಾಪುರ ಕಡೆ ಬರುತ್ತಿದ್ದ ಲಾರಿ ಡೊಮಗೇರಿ ಕ್ರಾಸಿನಲ್ಲಿ ಪಲ್ಟಿಯಾಯಿತು. ರಸ್ತೆಗೆ ಅಡ್ಡಲಾಗಿ ಲಾರಿ ಬಿದ್ದಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು. ತಾಸುಗಳ ಕಾಲ ಎರಡು ಕಡೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ತುರ್ತು ಪರಿಸ್ಥಿತಿಯಲ್ಲಿ ಬೇರೆ ಬೇರೆ ಕಡೆ ಚಲಿಸಬೇಕಾದವರು ಮಾರ್ಗ ಬದಲಿಸಿ ಪ್ರಯಾಣ ಮುಂದುವರೆಸಿದರು.
ಆ ಲಾರಿಯಲ್ಲಿ ಬರಪೂರ ಸರಕುಗಳಿದ್ದವು. ಲಾರಿ ರಸ್ತೆಯಲ್ಲಿ ಬೀಳುವ ವೇಳೆಯಲ್ಲಿಯೇ ಚಾಲಕ ಹಾಗೂ ನಿರ್ವಾಹಕ ಅಲ್ಲಿಂದ ಹಾರಿ ಜೀವ ಉಳಿಸಿಕೊಂಡರು. ರಸ್ತೆ ಮದ್ಯೆ ಲಾರಿ ಬಿದ್ದಿರುವ ವಿಷಯ ತಿಳಿದು ಪೊಲೀಸರು ಅಲ್ಲಿಗೆ ಧಾವಿಸಿದರು. ಲಾರಿ ಜಖಂ ಆಗಿದ್ದು, ಕೇನ್ ಬಳಸಿ ಅದನ್ನು ರಸ್ತೆ ಬದಿಗೆ ಸರಿಸಲಾಯಿತು.
Discussion about this post