ಸಿಇಟಿ ಪರೀಕ್ಷೆಯಲ್ಲಿ ರ್ಯಾಂಕ್ಪಡೆದಿದ್ದ ಜೀತೇಂದ್ರ ಪಡ್ತಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳುವ ಮೂಲಕ ಸಾವಿಗೆ ಶರಣಾಗಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಯ ಆತ್ಮಹತ್ಯೆಗೆ ಪ್ರೇಮ ವೈಫಲ್ಯವೇ ಕಾರಣ!
ಕಾರವಾರದ ಅಮದಳ್ಳಿಯ ಟೋಲ್ ನಾಕಾ ಬಳಿಯಿದ್ದ ಮನೆಯಿಂದ ಗುರುವಾರ ಭಾರೀ ಪ್ರಮಾಣದಲ್ಲಿ ಹೊಗೆ ಬರುತ್ತಿತ್ತು. ಅಲ್ಲಿ ಹೋಗಿ ನೋಡಿದವರಿಗೆ ಜೀತೇಂದ್ರ ಪಡ್ತಿ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವುದು ಕಾಣಿಸಿತು. ಮನೆಯ ಎರಡು ಬಾಗಿಲುಗಳನ್ನು ಭದ್ರವಾಗಿರಿಸಿ ಜೀತೇಂದ್ರ ಪಡ್ತಿ ಬೆಂಕಿ ಹಚ್ಚಿಕೊಂಡಿದ್ದರು. ಹೀಗಾಗಿ ಬಾಗಿಲು ಒಡೆದು ಒಳಗೆ ಪ್ರವೇಶಿಸಲು ಸಮಸ್ಯೆಯಾಗಿದ್ದು, ಜಿಲ್ಲಾಸ್ಪತ್ರೆಗೆ ಕರೆತಂದರೂ ಜೀತೇಂದ್ರ ಪಡ್ತಿ ಬದುಕಲಿಲ್ಲ.
ಈಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಜೀತೇಂದ್ರ ಪಡ್ತಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಉತ್ತರ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನಪಡೆದಿದ್ದರು. ಆದರೆ, ಪ್ರೇಮ ವೈಫಲ್ಯದಿಂದಾಗಿ ಅವರು ದುಡುಕಿನ ನಿರ್ಧಾರ ಮಾಡಿದರು. ಮನೆಯಲ್ಲಿದ್ದ ಕುಟುಂಬದ ಸದಸ್ಯರು ತಮ್ಮ ಕೆಲಸಗಳಲ್ಲಿ ತೊಡಗಿದ್ದಾಗ ಮನೆಯ ಎರಡು ಬಾಗಿಲುಗಳನ್ನು ಒಳಗಿನಿಂದ ಹಾಕಿಕೊಂಡು ತಮ್ಮ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿರುವುದು ಖಚಿತವಾಗಿದೆ.
