ಶಿರಸಿ ತಾಲೂಕಿನ ಬನವಾಸಿಯ ಮಾಡನಕೇರಿ ಕೃಷ್ಣ ಮಡಿವಾಳ ಅವರು ಮಳೆಯಿಂದ ಮನೆ ಕಳೆದುಕೊಂಡಿದ್ದು, ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಮಡಿವಾಳರ ಕುಟುಂಬಕ್ಕೆ ನೆರವಾಗಿದ್ದಾರೆ.
ಜೂನ್ 24ರಂದು ಸುರಿದ ಗಾಳಿ-ಮಳೆಗೆ ಕೃಷ್ಣ ಮಡಿವಾಳ ಅವರ ಮನೆ ಮೇಲೆ ಮರ ಬಿದ್ದಿತ್ತು. ಪರಿಣಾಮ ಮನೆ ನಾಶವಾಗಿತ್ತು. ಅನಂತಮೂರ್ತಿ ಹೆಗಡೆ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವಾನ ಹೇಳಿದರು. ವೈಯಕ್ತಿಕವಾಗಿ ಅವರು ನೆರವು ನೀಡಿದರು.
`ಮನೆ ಬಿದ್ದು 20 ದಿನವಾದರೂ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ಅಧಿಕಾರಿಗಳು ಭೇಟಿ ನೀಡಿಲ್ಲ. ಈಗಲಾದರೂ ಆಡಳಿತದವರು ಎಚ್ಚೆತ್ತು ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ’ ಎಂದು ಅನಂತಮೂರ್ತಿ ಹೆಗಡೆ ಎಚ್ಚರಿಸಿದರು.
ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ, ಪ್ರಮುಖರಾದ ಶ್ರೀರಾಮ ನಾಯ್ಕ, ಮಂಜುನಾಥ ನಾಯ್ಕ, ಮಡಿವಾಳ ಸಮಾಜದ ಅಣ್ಣಪ್ಪ ಮಡಿವಾಳ, ಪ್ರಕಾಶ, ಮೋಹನ, ಕಮಲಾಕರ, ನರಸಿಂಹ ಮಡಿವಾಳ ಸೇರಿದಂತೆ ಇನ್ನಿತರರು ಇದ್ದರು. ಮಡಿವಾಳ ಸಮಾಜದವರು ಈ ವೇಳೆ ಆರ್ಥಿಕ ಸಹಾಯ ಮಾಡಿದರು.
ಶಾಸಕ ಭೀಮಣ್ಣ ನಾಯ್ಕ ನೆರವು:
ಶಿರಸಿಯ ಇಸಳೂರು ಬಳಿಯ ಹೊಡಸಲದಲ್ಲಿ ಮಳೆಯಿಂದ ಕೊಟ್ಟಿಗೆಗೆ ಹಾನಿಯಾಗಿದ್ದು, ಶಿರಸಿ ಶಾಸಕ ಭೀಮಣ್ಣ ನಾಯ್ಕ ಸ್ಥಳಪರಿಶೀಲನೆ ಮಾಡಿದರು. ಈ ವೇಳೆ ಅವರು ಕೊಟ್ಟಿಗೆ ಮಾಲಕ ರಾಜು ನಾರಾಯಣ ನಾಯ್ಕ ಅವರಿಗೆ ಹಣಕಾಸಿನ ಸಹಾಯ ಮಾಡಿದರು.
