ಮುಂಡಗೋಡಿನ ಮಳಗಿ ಬಳಿಯಿರುವ ಧರ್ಮಾ ಜಲಾಶಯ ನೋಡಲು ನಿತ್ಯ ನೂರಾರು ಜನ ಬರುತ್ತಿದ್ದು, ಜಲಾಶಯ ವೀಕ್ಷಣೆಗೆ ಬಂದ ವ್ಯಕ್ತಿಯೊಬ್ಬರು ನೀರು ಪಾಲಾಗಿದ್ದಾರೆ. ನೀರು ಪಾಲಾದವನ ಶವವೂ ಸಿಕ್ಕಿದೆ.
ಹಾವೇರಿ ಜಿಲ್ಲೆಯ ಹಾನಗಲ್ ಭಾಗದ ಬಾಳಣ್ಣ ಸಂಗಪಾಳ್ಯ ಎಂಬಾತರು ಗುರುವಾರ ಮನೆಯಿಂದ ಹೊರಟಿದ್ದರು. ಅವರು ಮುಂಡಗೋಡಿಗೆ ಬಂದು ಜಲಾಶಯ ವೀಕ್ಷಣೆ ಮಾಡಿದ್ದರು. ಅದಾದ ನಂತರ ಬಾಳಣ್ಣ ಅವರ ಸುಳಿವಿರಲಿಲ್ಲ. ಶನಿವಾರ ಅವರು ಶವವಾಗಿ ಕಾಣಿಸಿಕೊಂಡಿದ್ದಾರೆ.
ಜಲಾಶಯದಲ್ಲಿ ಶವ ತೇಲುತ್ತಿರುವುದನ್ನು ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ದೇಹವನ್ನು ನೀರಿನಿಂದ ಮೇಲೆತ್ತಿದರು. ಧರ್ಮಾ ಜಲಾಶಯ ಭರ್ತಿಯಾದ ಕಾರಣ ಹಾನಗಲ್ ಭಾಗದಿಂದ ಅನೇಕರು ನೀರು ನೋಡಲು ಬರುತ್ತಿದ್ದಾರೆ. ಜಲಾಶಯಕ್ಕೆ ಪೂಜೆ ಸಲ್ಲಿಸಿ ಮರಳುತ್ತಿದ್ದಾರೆ. ಬಾಳಣ್ಣ ಅವರು ಅದೇ ರೀತಿ ಜಲಾಶಯ ನೋಡಲು ಆಗಮಿಸಿದ ಅನುಮಾನವ್ಯಕ್ತವಾಗಿದೆ.
