ಭಟ್ಕಳ ಬಳಿಯ ಮಾವಿನಕುರ್ವಾ ಬಂದರು ಪ್ರದೇಶದಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಏಳು ಜನ ಸಿಕ್ಕಿಬಿದ್ದಿದ್ದು, ಅನೇಕರು ಓಡಿ ಪರಾರಿಯಾಗಿದ್ದಾರೆ.
ಮಾವಿನಕುರ್ವೆಯ ರಾಘವೇಂದ್ರ ವೀರಮಾಸ್ತಿ, ನಾಗೇಶ ಖಾರ್ವಿ, ಟಗರುರೋಡಿನ ಸನಾವುಲ್ಲಾ ಭಾಷಾ, ಮಾವಿನಕುರ್ವೆಯ ಗೋವಿಂದ ಖಾರ್ವಿ, ಶಿರಾಲಿಯ ಮೋಹನ ದೇವಾಡಿಗ, ಮಾವಿನಕುರ್ವೆಯ ಶ್ರೀನಿವಾಸ ಖಾರ್ವಿ ಹಾಗೂ ಪಾಂಡುರAಗ ಖಾರ್ವಿ ಪೊಲೀಸ್ ದಾಳಿಯಲ್ಲಿ ಸಿಕ್ಕಿ ಬಿದ್ದವರು.
ಜೂಜುಕೋರರ ಬಳಿಯಿದ್ದ ಸಿಕ್ಕಿಬಿದ್ದವರ 4 ಬೈಕು, 4938ರೂ ಹಣವನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಬೈಕ್ ಸೇರಿ ಒಟ್ಟು 2 ಲಕ್ಷಕ್ಕೂ ಅಧಿಕ ಮೊತ್ತದ ಸಾಮಗ್ರಿಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಓಡಿ ಹೋದವರ ಹುಡುಕಾಟ ಮುಂದುವರೆದಿದ್ದು, ಅಂದರ್ ಬಾಹರ್ ಆಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ.
