ಗುರುಪೂರ್ಣಿಮೆಯ ದಿನ ಸನ್ಯಾಸ ದೀಕ್ಷೆ ಸ್ವೀಕರಿಸಿದ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಇದೀಗ ಉತ್ತರ ಕನ್ನಡ ಜಿಲ್ಲಾ ಪ್ರವಾಸ ಮಾಡುತ್ತಿದ್ದಾರೆ. ಜುಲೈ 16ರಂದು ಅವರು ಕುಮಟಾಗೆ ಆಗಮಿಸಲಿದ್ದಾರೆ.
ಆದಿ ಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿಗಳು ಆಗಿರುವ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲಾ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ ಅವರ ಜೊತೆ ನಿಶ್ಚಲಾನಂದ ಸ್ವಾಮೀಜಿಯವರು ಧರ್ಮ ಪ್ರಚಾರಕ್ಕಾಗಿ ಸಾಕಷ್ಟು ಶ್ರಮಿಸಿದ್ದರು. ಕಳೆದ ಆರು ವರ್ಷಗಳಿಂದ ನಿರ್ಮಲಾನಂದನಾಥ ಸ್ವಾಮೀಜಿಯವರು ಆದಿಚುಂಚನಗಿರಿ ಸಂಸ್ಥಾನದ ಸೇವೆಯಲ್ಲಿದ್ದರು.
ನಾಡಿನ ಎಲ್ಲಡೆ ಸಂಚರಿಸಿ ಅವರು ಆಧ್ಯಾತ್ಮಿಕ ವಿಷಯಗಳನ್ನು ಪ್ರಚಾರ ಮಾಡುತ್ತಿದ್ದರು. ಮೊನ್ನೆ ಗುರುಪೂರ್ಣಿಮೆಯ ದಿನ ಬಾಲಗಂಗಾಧರನಾಥ ಸ್ವಾಮೀಜಿಯವರ ಅನುಗ್ರಹದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಯವರು ಸನ್ಯಾಸ ದೀಕ್ಷೆ ಸ್ವೀಕರಿಸಿದರು.
ಸದ್ಯ ಜುಲೈ 16ರಂದು ಅವರು ಕುಮಟಾಗೆ ಬರಲಿದ್ದು, ಮಿರ್ಜಾನ್ ಊರಿನಲ್ಲಿ ಅವರನ್ನು ಭಕ್ತರು ಸ್ವಾಗತಿಸಲಿದ್ದಾರೆ. ಅದಾದ ನಂತರ ಸ್ವಾಮೀಜಿ ಮಹಾಸತಿ ಬೈರವಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಶಾಖಾ ಮಠಕ್ಕೆ ತೆರಳಲಿದ್ದಾರೆ.
ಅಲ್ಲಿ ಹೋಮ ನಡೆಸಲಿದ್ದಾರೆ. ಅದಾದ ಮೇಲೆ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸರ್ವ ಭಕ್ತರಿಗೂ ಮುಕ್ತ ಸ್ವಾಗತವಿದ್ದು, ಗುರುಗಳ ಆಶೀರ್ವಾದಪಡೆಯುವ ಅವಕಾಶ ಕಲ್ಪಿಸಲಾಗಿದೆ.
