ಮುಂಡಗೋಡಿನ ಸುನಿತಾ ಕೊಕರೆ ಅವರು ಆಂಬುಲೆನ್ಸಿನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ.
ಮುಂಡಗೋಡದ ತಾಬಸನಾಳ ಗ್ರಾಮದ ಸುನಿತಾ ಕೊಕರೆ (24) ಅವರಿಗೆ ಬುಧವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತು. ಹೀಗಾಗಿ ಅವರ ಕುಟುಂಬದವರು 108ಗೆ ಪೋನ್ ಮಾಡಿದರು. ಆಂಬುಲೆನ್ಸ ಮೂಲಕ ಸುನಿತಾ ಅವರನ್ನು ಆಸ್ಪತ್ರೆಗೆ ತರಲಾಯಿತು. ಆದರೆ, ಆಸ್ಪತ್ರೆಗೆ ಬರುವ ಮುನ್ನ ಅವರು ಮಗುವಿಗೆ ಜನ್ಮ ನೀಡಿದರು.
108ನ ವೈದ್ಯಕೀಯ ತಂತ್ರಜ್ಣ ಧನರಾಜ ಹಾಗೂ ಚಾಲಕ ಕೆಂಚೇಶ ಈ ವೇಳೆ ಸಮಯಪ್ರಜ್ಞೆ ಮೆರೆದರು. ಆಂಬುಲೆನ್ಸನ್ನು ರಸ್ತೆ ಬದಿ ನಿಲ್ಲಿಸಿ ಸುರಕ್ಷಿತ ಹೆರಿಗೆ ಮಾಡಿಸಿದರು. ಅದಾದ ನಂತರ ಆಂಬುಲೆನ್ಸನ್ನು ಮುಂಡಗೋಡು ಆಸ್ಪತ್ರೆಗೆ ಓಡಿಸಿದರು.
ಅಲ್ಲಿದ್ದ ವೈದ್ಯಕೀಯ ಸಿಬ್ಬಂದಿ ತಾಯಿ-ಮಗುವನ್ನು ಬರಮಾಡಿಕೊಂಡಿದ್ದು, ಅವರಿಬ್ಬರಿಗೂ ಅಗತ್ಯ ಚಿಕಿತ್ಸೆ ನೀಡಿದರು.
