ಹೊನ್ನಾವರದ ಆರ್ ಟಿ ಓ ಕಚೇರಿ ಅವ್ಯವಸ್ಥೆಯ ಆಗರವಾಗಿದೆ. ಹೊಂಡಮಯ ರಸ್ತೆ, ಸೋರುವ ಕಚೇರಿ ಹಾಗೂ ಭ್ರಷ್ಟಾಚಾರದಿಂದಾಗಿ ಸಾರ್ವಜನಿಕರು ಬೇಸತ್ತಿದ್ದಾರೆ.
ಇಲ್ಲಿ ಕಾರು ಚಾಲನೆ ಪರವಾನಿಗೆಪಡೆಯಬೇಕು ಎಂದರೆ ಸರ್ಕಾರಿ ಶುಲ್ಕ ಪಾವತಿಸದ ನಂತರವೂ 200ರೂ ಕೊಡಬೇಕು. ಚಾಲನೆ ವೇಳೆ ಕಾರಿನಲ್ಲಿ ಕೂರುವ ವ್ಯಕ್ತಿಯೊಬ್ಬ `ಸಾಹೇಬರ ಖುಷಿಗೆ’ ಎಂಬ ಲೆಕ್ಕದ ಅಡಿ ಕಾರಿನೊಳಗೆ ಈ ವ್ಯವಹಾರ ನಡೆಯುತ್ತದೆ. ಹೆಚ್ಚುವರಿ ಖುಷಿ ಕೊಟ್ಟರೆ ವಾಹನ ಓಡಿಸಲು ಬಾರದಿದ್ದರೂ ಲೈಸನ್ಸ್ ಸಿಗುತ್ತದೆ. ಈ ರೀತಿ ನಡೆದಿರುವುದನ್ನು ಕಂಡ ಅನೇಕರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಗುರುವಾರ ನಡೆದ ರಿಯಾಲಿಟಿ ಚಕ್’ನಲ್ಲಿಯೂ ಇಲ್ಲಿನ ಅವ್ಯವಸ್ಥೆಗಳು ಬಹಿರಂಗವಾಗಿದೆ.
ಕಾರು ಓಡಾಟ ನಡೆಸಬೇಕಾ ರಸ್ತೆ ಸಂಪೂರ್ಣ ಹೊಂಡಗಳಿAದ ಕೂಡಿದು, ಅಲ್ಲಿ ವಾಹನ ಓಡಿಸಲು ಹರಸಾಹಸ ಅನಿವಾರ್ಯ. ಲೈಸನ್ಸ್ ಪಡೆಯಲು ಅಲ್ಲಿ ಇಲ್ಲಿ ಓಡಾಟ ಮಾಡಬೇಕಾಗಿದ್ದು ಸೋರುವ ಮಾಳಿಗೆ ಕೆಳಗೆ ನಿಲ್ಲುವುದೇ ದೊಡ್ಡ ಸವಾಲು. ಕಚೇರಿ ಹಿಂದಿರುವ ಕೌಂಟರ್ ಬಳಿಯ ಮಾಳಿಗೆಯೂ ಹಾರಿ ಹೋಗಿದ್ದರಿಂದ ಅಲ್ಲಿಯೂ ನೀರು ಸೋರುತ್ತದೆ.
`ಆರ್ ಟಿ ಓ ಕಚೇರಿ ಸುತ್ತಲು ಸಿಸಿ ಕ್ಯಾಮರಾ ಅಳವಡಿಸಬೇಕು. ಆಗ ಭ್ರಷ್ಟಾಚಾರಕ್ಕೆ ಅಲ್ಪ ಪ್ರಮಾಣದಲ್ಲಾದರೂ ಕಡಿವಾಣ ಬೀಳಲಿದೆ. ಎಜೆಂಟರ ಹಾವಳಿಯೂ ದೂರವಾಗಲಿದೆ. ಜೊತೆಗೆ ಅಲ್ಲಿರುವ ಎಲ್ಲಾ ಅವ್ಯವಸ್ಥೆ ಸರಿಪಡಿಸಬೇಕು’ ಎಂದು ಜನಸಾಮಾನ್ಯರ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ಆಗ್ರಹಿಸಿದರು. ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಸಹ ಇದ್ದರು.
