ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಕರಾವಳಿ ಭಾಗದ ಅಂಗನವಾಡಿ-ಶಾಲೆ ಹಾಗೂ ಪ್ರೌಢಶಾಲೆಗಳಿಗೆ ಜುಲೈ 17ರಂದು ಜಿಲ್ಲಾಡಳಿತ ರಜೆ ಘೋಷಿಸಿದೆ.
ಭಾರತೀಯ ಹವಾಮಾನ ಇಲಾಖೆ ನೀಡಿದ ತುರ್ತು ಮಾಹಿತಿ ಅನ್ವಯ ಡೀಸಿ ಲಕ್ಷ್ಮೀಪ್ರಿಯಾ ಈ ಆದೇಶ ಮಾಡಿದ್ದಾರೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಶಾಲೆಗಳಿಗೆ ಈ ರಜೆ ನಿಯಮ ಅನ್ವಯವಾಗಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಾರವಾರ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ರಜೆ ನಿಯಮ ಕಾರ್ಯರೂಪಕ್ಕೆ ತರಲು ಆದೇಶಿಸಲಾಗಿದೆ. ಮಲೆನಾಡು ಭಾಗದ ಶಾಲೆಗಳಿಗೆ ರಜೆ ನಿಯಮ ಅನ್ವಯ ಆಗುವುದಿಲ್ಲ.
ಈಗಿನ ರಜಾ ಅವಧಿಯ ಕಲಿಕೆಯನ್ನು ಬೇಸಿಗೆ ಅವಧಿಯಲ್ಲಿ ಸರಿಹೊಂದಿಸುವಂತೆ ಸೂಚಿಸಲಾಗಿದೆ.
