ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಗೆ ತೊಂದರೆ ನೀಡಿದ ವ್ಯಕ್ತಿ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಜೊತೆಗೆ ಅಲ್ಲಿನ ವಿಡಿಯೋ ಚಿತ್ರಿಕರಿಸಿ ವೈರಲ್ ಮಾಡಿದವನ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜುಲೈ 15ರ ರಾತ್ರಿ ಶಿರಸಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಬಸ್ಸಿಗಾಗಿ ಕಾಯುತ್ತಿದ್ದರು. ಮಹಿಳೆ ಒಂಟಿಯಾಗಿರುವುನ್ನು ನೋಡಿದ ವ್ಯಕ್ತಿಯೊಬ್ಬ ಅವರಿಗೆ ಕಾಟ ಕೊಡಲು ಶುರು ಮಾಡಿದರು. ರಾತ್ರಿ 9.30ಕ್ಕೆ ಮಹಿಳೆ ಬಳಿ ಬಂದ ಆತ ಅನುಚಿತವಾಗಿ ವರ್ತಿಸಿದರು. ಅದಾದ ನಂತರ ಅನಗತ್ಯ ಕುರುಕುಳ ನೀಡಿದರು.
ಇದನ್ನು ಸಹಿಸಿಕೊಳ್ಳದ ಆ ಮಹಿಳೆ ಕಿರುಕುಳ ಕೊಟ್ಟವನಿಗೆ ಹಿಗ್ಗಾಮುಗ್ಗ ಬಾರಿಸಿದರು. ಥಳಿತಕ್ಕೆ ಒಳಗಾದ ವ್ಯಕ್ತಿ ಅಲ್ಲಿಂದ ಜಾಗ ಖಾಲಿ ಮಾಡಿದರು. ಆದರೆ, ಆತ ಕಿರುಕುಳ ನೀಡಿದ ಹಾಗೂ ಥಳಿತಕ್ಕೆ ಒಳಗಾದ ವಿದ್ಯಮಾನವನ್ನು ಇನ್ನೊಬ್ಬರು ಮೊಬೈಲ್ ಮೂಲಕ ರೆಕಾರ್ಡ ಮಾಡಿಕೊಂಡಿದ್ದರು.
ಎಲ್ಲವೂ ಮುಗಿದ ಮೇಲೆ ಆ ವಿಡಿಯೋವನ್ನು ಅವರು ವೈರಲ್ ಮಾಡಿದರು. ವೈರಲ್ ಮಾಡುವ ಮುನ್ನ ಮಹಿಳೆಯ ಮುಖ ಮರೆ ಮಾಚಲಿಲ್ಲ. ಇದರಿಂದ ಆ ಮಹಿಳೆ ಅವಮಾನ ಅನುಭವಿಸಿದ್ದು, ಕಿರುಕುಳ ನೀಡಿದ ವ್ಯಕ್ತಿಯ ಜೊತೆ ವಿಡಿಯೋ ವೈರಲ್ ಮಾಡಿದವನ ವಿರುದ್ಧವೂ ದೂರು ನೀಡಿದರು. ಪೊಲೀಸರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡರು.
