ದಾಂಡೇಲಿಯ ಕೆರೆವಾಡದ ಬಳಿ ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿವೆ. ಕಾರು ಜಖಂ ಆದರೂ ಪ್ರಯಾಣಿಕರ ಪ್ರಾಣಕ್ಕೆ ಹಾನಿಯಾಗಿಲ್ಲ.
ದಾಂಡೇಲಿ ಹಳಿಯಾಳ ರಾಜ್ಯ ಹೆದ್ದಾರಿಯ ಕೆರವಾಡ ಹತ್ತಿರ ಶುಕ್ರವಾರ ಈ ಅಪಘಾತ ನಡೆದಿದೆ. ದಾಂಡೇಲಿಯಿAದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಹಿರಿಯ ವೈದ್ಯರ ಡಾ ಜಿ ವಿ ಭಟ್ ಅವರ ಕಾರಿಗೆ ಹಳಿಯಾಳದಿಂದ ದಾಂಡೇಲಿ ಕಡೆ ಬರುತ್ತಿದ್ದ ಕಾರು ಗುದ್ದಿದೆ.
ಜೊಯಿಡಾ ಕಡೆ ಹೊರಟಿದ್ದ ಶಾಸಕ ಆರ್ ವಿ ದೇಶಪಾಂಡೆ ಅವರು ಡಾ ಜಿ ವಿ ಭಟ್ಟ ಅವರ ಕಾರು ಅಪಘಾತದ ಸುದ್ದಿ ಕೇಳಿ ತಮ್ಮ ಕಾರು ನಿಲ್ಲಿಸಿದರು. ವೈದ್ಯರ ಆರೋಗ್ಯ ವಿಚಾರಿಸಿ ಮುಂದೆ ಚಲಿಸಿದರು. ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.
