ಚಲಿಸುವ ರೈಲಿನಲ್ಲಿ ಹುಚ್ಚಾಟ ನಡೆಸಿದ ಕೇರಳದ ಪ್ರಯಾಣಿಕರೊಬ್ಬರು ಕುಮಟಾದಲ್ಲಿ ರೈಲಿನಿಂದ ಬಿದ್ದು ಸಾವನಪ್ಪಿದ್ದಾರೆ.
ಜುಲೈ 18ರಂದು ಕೇರಳದ ಬೆಬಿ ಥಾಮಸ್ (56) ಅವರು ನೇತ್ರಾವತಿ ಎಕ್ಸಪ್ರೆಸ್ ರೈಲಿನಲ್ಲಿ ಹೋಗುತ್ತಿದ್ದರು. ಕುಮಟಾದ ಅಘನಾಶಿನಿ ನದಿ ಬಳಿ ರೈಲು ಚಲಿಸುತ್ತಿದ್ದಾಗ ಅವರು ಬಾಗಿಲ ಬಳಿ ಬಂದಿದ್ದರು. ಅಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುವ ದಾವಂತದಲ್ಲಿ ಬೆಬಿ ಥಾಮಸ್ ಅವರು ಒಂದು ಹೆಜ್ಜೆ ಮುಂದಿಟ್ಟರು.
ಆ ವೇಳೆಗೆ ಕಾಲು ಜಾರಿತು. ರೈಲಿನಿಂದ ಬಿದ್ದ ರಭಸಕ್ಕೆ ಅವರ ತಲೆ ಹಳಿಗೆ ಬಡಿಯಿತು. ಅಲ್ಲಿದ್ದ ಜಲ್ಲಿ ಕಲ್ಲುಗಳು ತಲೆಯೊಳಗೆ ಹೊಕ್ಕಿ ರೈಲು ಹಳಿಯ ಮೇಲೆಯೇ ಸಾವನಪ್ಪಿದರು. ಮಿರ್ಜಾನ್ ರೈಲು ನಿಲ್ದಾಣದ ಟ್ರಾಕ್ಮೆನ್ ವಿಷ್ಣು ನಾಯ್ಕ ಅವರು ಹಳಿಯ ಮೇಲೆ ಶವ ಬಿದ್ದಿರುವುದನ್ನು ಗಮನಿಸಿ ಪೊಲೀಸ್ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆ ಕುಟುಂಬಕ್ಕೆ ವಿಷಯ ಮುಟ್ಟಿಸಿದರು.
