ಜಾಗದ ವಿಷಯವಾಗಿ ಜಗಳವಾಡುತ್ತಿದ್ದ ದರ್ಶನ ನಾಯ್ಕ ಹಾಗೂ ಬೊಮ್ಮಯ್ಯ ನಾಯ್ಕ ನಡುವೆ ಹೊಡೆದಾಟ ನಡೆದಿದ್ದು, ಇದನ್ನು ಪ್ರಶ್ನಿಸಿದ ನಿತ್ಯಾನಂದ ನಾಯ್ಕ ಸಹ ಪೆಟ್ಟು ತಿಂದಿದ್ದಾರೆ.
ಅoಕೋಲಾದ ಕಣಗಿಲ್ ಬಳಿಯ ಶಟಗೇರಿಯಲ್ಲಿ ದರ್ಶನ ನಾಯ್ಕ ವಾಸವಾಗಿದ್ದರು. ಅದೇ ಊರಿನ ಬೊಮ್ಮಯ್ಯ ನಾಯ್ಕ ಅವರು ದರ್ಶನ ನಾಯ್ಕ ಅವರೊಂದಿಗೆ ಜಾಗದ ವಿಷಯದಲ್ಲಿ ವೈಮನಸ್ಸು ಹೊಂದಿದ್ದರು. ಹೀಗಾಗಿ ಅವರಿಬ್ಬರ ನಡುವೆ ಆಗಾಗ ಜಗಳ-ಬೈಗುಳ ಸಾಮಾನ್ಯವಾಗಿತ್ತು.
ಜುಲೈ 17ರಂದು ದರ್ಶನ ನಾಯ್ಕ ಬೈಕ್ ಮೇಲೆ ಹೋಗುವಾಗ ಬೊಮ್ಮಯ್ಯ ನಾಯ್ಕ ಅವರು ಅಡ್ಡಗಟ್ಟಿದರು. ಚಾಕುವಿನಿಂದ ದರ್ಶನ ನಾಯ್ಕ ಅವರ ಕೈಗೆ ಗಾಯ ಮಾಡಿದರು. ಬೆದರಿದ ದರ್ಶನ ನಾಯ್ಕ ಅಲ್ಲಿಂದ ಪರಾರಿಯಾಗಿದ್ದು, ಈ ವಿಷಯವನ್ನು ತಮ್ಮ ನಿತ್ಯಾನಂದ ನಾಯ್ಕರ ಬಳಿ ಹೇಳಿದರು. ಅದಾದ ನಂತರ ನಿತ್ಯಾನಂದ ನಾಯ್ಕರು ಬೈಕಿನಲ್ಲಿ ಬರುತ್ತಿದ್ದ ದರ್ಶನ ನಾಯ್ಕರನ್ನು ಅಡ್ಡಗಟ್ಟಿದರು.
`ನನ್ನ ಅಣ್ಣನಿಗೆ ಏಕೆ ಹೊಡೆದೆ?’ ಎಂದು ನಿತ್ಯಾನಂದ ನಾಯ್ಕ ಪ್ರಶ್ನಿಸಿದರು. `ನಮ್ಮ ಜಾಗದ ವಿಷಯಕ್ಕೆ ಬಂದರೆ ಹುಷಾರ್’ ಎಂದು ಎಚ್ಚರಿಸಿದ ದರ್ಶನ ನಾಯ್ಕ ನಿತ್ಯಾನಂದ ನಾಯ್ಕರ ಮೇಲೆಯೂ ಕೈ ಮಾಡಿದರು. ಕಿಸೆಯಲ್ಲಿದ್ದ ಚಾಕು ತೆರೆದು ನಿತ್ಯಾನಂದ ನಾಯ್ಕರಿಗೂ ಗಾಯ ಮಾಡಿದರು. ಜೊತೆಗೆ ಅಲ್ಲಿದ್ದ ಬಡಿಗೆಯಿಂದಲೂ ಬಡಿದರು.
ಕೊಲೆ ಬೆದರಿಕೆ ಎದುರಿಸಿದ ಈ ಸಹೋದರರು ಆಸ್ಪತ್ರೆ ಸೇರಿದ್ದು, ಅಲ್ಲಿಗೆ ಬಂದ ಅಂಕೋಲಾ ಪೊಲಿಸ್ ಠಾಣೆ ಸಿಬ್ಬಂದಿಗೆ ಹೊಡೆದಾಟದ ವಿಷಯ ವಿವರಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
