ತಂಗಿ ಜೊತೆ ಭಟ್ಕಳ ಪೇಟೆ ತಿರುಗಲು ಹೋಗಿದ್ದ 18 ವರ್ಷದ ಜಿಯಾನ ಮುನಾಫ್ ಈವರೆಗೂ ಮನೆಗೆ ಬಂದಿಲ್ಲ. ಜಿಯಾನ ಮುನಾಫ್ ಎಲ್ಲಿ ಹೋದರು? ಎಂದು ಜೊತೆಗಿದ್ದ ತಂಗಿಗೂ ಗೊತ್ತಾಗಿಲ್ಲ!
ಭಟ್ಕಳದ ಶಿರಾಲಿ ಬಳಿಯ ತಟ್ಟಿಹಕ್ಕಲುವಿನಲ್ಲಿ ಜಿಯಾನ ಮುನಾಫ್ ವಾಸವಾಗಿದ್ದರು. ಜುಲೈ 18ರ ಸಂಜೆ 4.45ಕ್ಕೆ ಅವರು ಭಟ್ಕಳಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿದ್ದರು. ಆಗ, ಜಿಯಾನ್ ಮುನಾಫ್ ಅವರ ತಂಗಿಯೂ ಜೊತೆ ಬಂದರು. ಅವರಿಬ್ಬರು ರಿಕ್ಷಾ ಏರಿ ಭಟ್ಕಳ ಪೇಟೆ ಸುತ್ತಾಡಿದರು.
5.45ರ ವೇಳೆಗೆ ತಟ್ಟಿಹಕ್ಕಲು ಮೈದಾನದ ಬಳಿ ತಂಗಿಯನ್ನು ಬಿಟ್ಟ ಜಿಯಾನ ಮುನಾಫ್ ಸ್ನೇಹಿತೆಯ ಮನೆಗೆ ಹೋಗಿ ಬರುವುದಾಗಿ ಹೇಳಿದರು. ಅದೇ ರಿಕ್ಷಾ ಏರಿ ಜಿಯಾನ್ ಮುನಾಫ್ ಮುಂದೆ ಹೋದರು. ಆದರೆ, ಮರುದಿನ ಬೆಳಗಾದರೂ ಜಿಯಾನ್ ಮುನಾಫ್ ಮನೆಗೆ ಬರಲಿಲ್ಲ. ಸಂಜೆಯಾದರೂ ಅವರ ಸುಳಿವು ಸಿಗಲಿಲ್ಲ.
ಹೀಗಾಗಿ ಪೊಲೀಸರು ಜಿಯಾನ್ ಮುನಾಫ್ ಅವರ ಹುಡುಕಾಟ ಶುರು ಮಾಡಿದ್ದಾರೆ. ಗೋದಿ ಬಣ್ಣ, ಸಾಧಾರಣ ಮೈಕಟ್ಟು ಹೊಂದಿರುವ ಜಿಯಾನ್ ಕನ್ನಡದ ಜೊತೆ ಉರ್ದು ಮಾತನಾಡುತ್ತಾರೆ. ಅವರನ್ನು ನೋಡಿದರೆ ಇಲ್ಲಿ ಫೋನ್ ಮಾಡಿ: 9480805252
