ಈ ವರ್ಷ 10 ಸಾವಿರ ಎಕರೆ ಅರಣ್ಯ ಭೂಮಿ ಸಾಗುವಳಿ ಪ್ರದೇಶವನ್ನು ಒಕ್ಕಲೆಬ್ಬಿಸಲು ಸರ್ಕಾರ ಸಜ್ಜಾಗಿದೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ 1450 ಎಕರೆ ಭೂಮಿಯೂ ಒಳಗೊಂಡಿದೆ.
ಅರಣ್ಯ ಇಲಾಖೆಯ ಅವೈಜ್ಞಾನಿಕ ಆದೇಶಕ್ಕೆ ನ್ಯಾಯವಾದಿ ರವೀಂದ್ರ ನಾಯ್ಕ ಕಿಡಿಕಾರಿದ್ದಾರೆ. ಅತಿಕ್ರಮಣದಾರರನ್ನು ಆತಂಕಕ್ಕೆ ಒಳಪಡಿಸುವುದು ಸರಿಯಲ್ಲ ಎಂದವರು ಅನಿಸಿಕೆವ್ಯಕ್ತಪಡಿಸಿದ್ದಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷೀ ನೇಗಿ ಅವರು ಹೊರಡಿಸಿದ ಆದೇಶವನ್ನು ರವೀಂದ್ರ ನಾಯ್ಕರು ಖಂಡಿಸಿದ್ದಾರೆ.
ಅತಿಕ್ರಮಣ ತೆರವು ವಿಷಯದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಅಧೀನ ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆ. `ಪರಿಸರ ಸಮತೋಲನ ಕಾಪಾಡುವ ಉದ್ದೇಶದಿಂದ ಅರಣ್ಯ ಅತಿಕ್ರಮಣದ ಪ್ರದೇಶ ವಶಪಡಿಸಿಕೊಳ್ಳುವುದು ಅತಿ ಆವಶ್ಯ ಎಂದವರು ಹೇಳಿದ್ದು ಸಮಂಜಸವಲ್ಲ’ ಎಂದಿದ್ದಾರೆ.
