ಕಳ್ಳತನದ ವೇಳೆ ಬೆಳಕು ಮೂಡಿಸಿ ಕಳ್ಳರ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದ ಬೀದಿ ದೀಪವನ್ನೇ ಕಳ್ಳರು ದೋಚಿದ್ದಾರೆ. ಕುಮಟಾದ ತೋರ್ಕೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿದ್ದ ಎರಡು ಬೀದಿ ದೀಪಗಳು ಕಾಣೆಯಾಗಿದೆ.
2022 ಹಾಗೂ 2023ರಲ್ಲಿ ತೊರ್ಕೆ ಗ್ರಾಮ ಪಂಚಾಯತದಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿತ್ತು. ಅಮೃತ ಯೋಜನೆ ಅಡಿ ಅಳವಡಿಸಿದ್ದ ಈ ದೀಪಗಳು ಸೋಲಾರ್ ಆಧಾರಿತವಾಗಿ ಕೆಲಸ ಮಾಡುತ್ತದ್ದವು. ರಾತ್ರಿ ವೇಳೆ ಸ್ವಯಂ ಚಾಲಿತವಾಗಿ ಇಲ್ಲಿ ಬೆಳಕು ಮೂಡುತ್ತಿದ್ದವು.
ಮಳಲಿ ಗ್ರಾಮದ ಬಾಳೆಘಟ್ಟ ಪ್ರದೇಶದಲ್ಲಿ ಬೀದಿ ದೀಪ ಅಳವಡಿಸಿದನ್ನು ಕಳ್ಳರಿಂದ ಸಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅದಾಗಿಯೂ ತೊರ್ಕೆ ಗ್ರಾಮ ಪಂಚಾಯತದವರು ಬೀದಿ ದೀಪವನ್ನು ಅಲ್ಲಿಯೇ ಉಳಿಸಿಕೊಂಡಿದ್ದರು. ಮೇ 26ರಂದು ಬೀದಿ ದೀಪ ಅಲ್ಲಿಯೇ ಇದ್ದು, ಜುಲೈ 16ರಂದು ತೊರ್ಕೆ ಪಿಡಿಓ ಕೋಮಲ ಮೊಗೇರ್ ಅಲ್ಲಿ ಹೋದಾಗ ದೀಪ ಬೆಳಗಲಿಲ್ಲ.
ಒಟ್ಟು 65ಸಾವಿರದ ಎರಡು ಬೀದಿ ದೀಪಗಳನ್ನು ಕಳ್ಳರು ಅಪಹರಿಸಿದ್ದರು. ಸರ್ಕಾರಿ ಸ್ವತ್ತು ಕದ್ದ ಅಪರಿಚಿತರ ವಿರುದ್ಧ ಪಿಡಿಓ ಕೋಮಲ ಮೊಗೇರ್ ಪೊಲೀಸ್ ದೂರು ನೀಡಿದರು. ಗೋಕರ್ಣ ಪೊಲೀಸರು ಬೀದಿ ದೀಪ ಕದ್ದವರ ಹುಡುಕಾಟ ನಡೆಸಿದ್ದಾರೆ.
