ಮೇಷ ರಾಶಿ: ಆರಾಮದಾಯಕ ಭಾವನೆಯಲ್ಲಿ ಬದುಕುತ್ತೀರಿ. ಕ್ಷಣ ಕ್ಷಣವನ್ನು ಆನಂದಿಸುತ್ತೀರಿ. ಸ್ನೇಹಿತರ ಜೊತೆಗಿನ ಚಟುವಟಿಕೆಗಳು ಆಹ್ಲಾದಕರವಾಗಿರುತ್ತದೆ. ಹೂಡಿಕೆ ಬಗ್ಗೆ ಯೋಚಿಸಿ ನಿರ್ಧಾರ ಮಾಡಿ.
ವೃಷಭ ರಾಶಿ: ಆರ್ಥಿಕ ಸಮಸ್ಯೆಯೂ ನಿಮ್ಮ ರಚನಾತ್ಮಕ ಶಕ್ತಿಯನ್ನು ಹಾಳು ಮಾಡುತ್ತದೆ. ಕುಟುಂಬದವರ ಜೊತೆ ಶಾಂತಿಯುತ ದಿನ ಆನಂದಿಸಿ. ಸಮಸ್ಯೆ ಹೇಳಿಕೊಂಡು ಬರುವವರನ್ನು ಈ ದಿನ ನಿರ್ಲಕ್ಷಿಸಿ. ಬೇರೆ ಬೇರೆ ಚಿಂತೆ ಮನಸಿಗೆ ಬರಲು ಬಿಡಬೇಡಿ.
ಮಿಥುನ ರಾಶಿ: ಆಸ್ತಿ ವ್ಯವಹಾರಗಳು ಅಸಾಧಾರಣ ಲಾಭ ತರಲಿದೆ. ಮನೆ ಸೌಂದರ್ಯದ ಜೊತೆ ಮಕ್ಕಳ ಅಗತ್ಯವನ್ನು ಅರಿತುಕೊಳ್ಳಿ. ಮಕ್ಕಳು ಆನಂದ ಹಾಗೂ ಸಂತೋಷವನ್ನು ಕೊಡುತ್ತಾರೆ.
ಕರ್ಕ ರಾಶಿ: ಸ್ಪರ್ಧಾತ್ಮಕ ಪರೀಕ್ಷೆಗೆ ಹೋಗುತ್ತಿರುವವರು ಶಾಂತವಾಗಿರಬೇಕು. ಪರೀಕ್ಷೆ ಭಯ ಬೇಡವೇ ಬೇಡ. ನಿಮ್ಮ ಪ್ರಯತ್ನಗಳು ಖಂಡಿತವಾಗಿಯೂ ಸಕಾರಾತ್ಮಕ ಫಲಿತಾಂಶ ತರುತ್ತವೆ.
ಸಿಂಹ ರಾಶಿ: ಯಶಸ್ಸು ಹತ್ತಿರವಿರುವಂತೆ ಕಾಣಿಸಿದರೂ ಶಕ್ತಿ ಕುಂಠಿತ ಸಹಜ. ಬೇರೆಯವರ ಸಹಾಯವಿಲ್ಲದೇ ಹಣಗಳಿಸಲು ಸಾಧ್ಯ. ನಿಮ್ಮ ಮೇಲೆ ನಿಮಗೆ ನಂಬಿಕೆ ಮೂಡಬೇಕು. ಹಳೆಯ ಸಂಪರ್ಕದಿoದ ಹೊಸ ಸಮಸ್ಯೆ ಬರಬಹುದು. ಪ್ರತಿ ವಿಷಯದಲ್ಲಿಯೂ ಪ್ರೀತಿ ತೋರುವುದು ಸರಿಯಲ್ಲ.
ಕನ್ಯಾ ರಾಶಿ: ಎಲ್ಲಾ ಬದ್ಧತೆಗಳ ಜೊತೆ ಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಮಕ್ಕಳು ಹೆಚ್ಚು ಗಮನ ಬಯಸಿದರೂ ಬೆಂಬಲ ಮತ್ತು ಕಾಳಜಿಯಿಂದ ವರ್ತಿಸುತ್ತಾರೆ. ಈ ದಿನ ಗುಲಾಬಿ ಹೂವಿನ ಸುಗಂಧ ಆಹ್ಲಾದಕರ ಅನುಭವ ನೀಡುತ್ತದೆ.
ತುಲಾ ರಾಶಿ: ಹಣಕಾಸಿನ ಭಾಗ ಉತ್ತಮವಾಗಿರುತ್ತದೆ. ಆದರೆ, ಅನಗತ್ಯವಾಗಿ ಹಣ ಹಾಳಾಗಬಾರದು. ಹೊಸ ಆಗಮನ ಕುಟುಂಬದಲ್ಲಿ ಸಂತೋಷ ಮೂಡಿಸುತ್ತದೆ. ಹಿಂದಿನ ತಪ್ಪುಗಳನ್ನು ಮನ್ನಿಸುವ ಮೂಲಕ ಜೀವನವನ್ನು ಸಮರ್ಥಗೊಳಿಸುತ್ತೀರಿ.
ವೃಶ್ಚಿಕ ರಾಶಿ: ಸಕಾರಾತ್ಮಕ ಚಿಂತನೆಯ ಜೊತೆ ರೋಗದ ವಿರುದ್ಧ ಹೋರಾಡಲು ಪ್ರಯತ್ನಿಸಿ. ಹಣದ ಪರಿಸ್ಥಿತಿ ಸುಧಾರಿಸಲಿದೆ. ಕೌಟುಂಬಿಕ ಉದ್ಯಮ ಶುರುವಿಗೆ ಪವಿತ್ರವಾದ ದಿನ.
ಧನು ರಾಶಿ: ಹಣಕಾಸಿನ ಸುಧಾರಣೆ ಕಾಣಲಿದೆ. ಖರೀದಿಗೆ ಹಣಕಾಸು ಸಿಗಲಿದೆ. ಸಾಮಾಜಿಕ ಸಮಾರಂಭಗಳಲ್ಲಿ ಪ್ರಭಾವಿಗಳ ಜೊತೆ ಬೆರೆಯುತ್ತೀರಿ. ಪ್ರಮುಖ ಜನರ ಜೊತೆ ಬಾಂಧವ್ಯ ಸುಧಾರಣೆಗೆ ಅವಕಾಶ ಸಿಗಲಿದೆ.
ಮಕರ ರಾಶಿ: ದುಂದು ವೆಚ್ಚ ಮತ್ತು ಸಂಶಯಾಸ್ಪದವಾದ ಹಣಕಾಸು ಯೋಜನೆಗಳಿಂದ ದೂರವಿರಿ. ಸ್ನೇಹಿತರು ಹಾಗೂ ಕುಟುಂಬದವರ ಜೊತೆ ಸಂಜೆ ಕಳೆಯುವಿರಿ.
ಕುಂಭ ರಾಶಿ: ಸಣ್ಣ ಉದ್ಯೋಗವನ್ನು ಮಾಡುವ ಜನರು ಆಪ್ತರಿಂದ ಸಲಹೆಪಡೆಯುವುದು ಉತ್ತಮ. ಸಲಹೆಗಳಿಂದ ಆರ್ಥಿಕ ಲಾಭ ಸಿಗಲಿದೆ. ಮನೆಯಲ್ಲಿನ ಕೆಲ ಬದಲಾವಣೆ ಭಾವುಕರನ್ನಾಗಿಸಬಹುದು.
ಮೀನ ರಾಶಿ: ಹಣದ ಆಗಮನದಿಂದ ಆರ್ಥಿಕ ಸಮಸ್ಯೆ ಪರಿಹಾರ ಆಗಲಿದೆ. ಹಠಮಾರಿ ಸ್ವಭಾವ ಬೇರೆಯವರಿಗೆ ನೋವು ಕೊಡುತ್ತದೆ. ಪೊಷಕರ ಶಾಂತಿ ಹಾಳು ಮಾಡುವ ಸಾಧ್ಯತೆಯಿದೆ. ಪಾಲಕರ ಸಲಹೆಪಡೆಯುವುದು ಮುಖ್ಯ. ಅವರಿಗೆ ನೋವು ಮಾಡದಿರಲು ನಿರ್ಧರಿಸಿ.
