ಭಟ್ಕಳದ ನಾಗಪ್ಪಯ್ಯ ಭಟ್ಟ ಅವರು ಸಂಗ್ರಹಿಸಿದ್ದ ಅಡಿಕೆಯನ್ನು ಕಳ್ಳರು ದೋಚಿದ್ದಾರೆ. ಅಡಿಕೆ ಕಾಣೆಯಾದ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದು, ಪೊಲೀಸರು ಕಳ್ಳನ ಹುಡುಕಾಟ ನಡೆಸಿದ್ದಾರೆ.
ಭಟ್ಕಳ ಕೋಟಖಂಡ ಮಾರುಕೇರಿಯಲ್ಲಿ ನಾಗಪ್ಪಯ್ಯ ಭಟ್ಟ ಅವರು ವಾಸವಾಗಿದ್ದರು. 76 ವರ್ಷವಾದರೂ ಅವರು ಕೃಷಿ ಕೆಲಸ ಬಿಟ್ಟಿರಲಿಲ್ಲ. ತಮ್ಮ ಹಳೆಯ ಮನೆಯಲ್ಲಿ ಅವರು ಅಡಿಕೆಯನ್ನು ದಾಸ್ತಾನು ಮಾಡಿದ್ದರು.
ಜುಲೈ 16ರಂದು ಅವರು ಹಳೆಯ ಮನೆಗೆ ಹೋದಾಗ ಅಲ್ಲಿ ಅಡಿಕೆ ಹಾಗೇ ಇತ್ತು. ಜುಲೈ 17ರ ಬೆಳಗ್ಗೆ ಅಲ್ಲಿ ಹೋದಾಗ ಅಡಿಕೆ ಕಾಣುತ್ತಿರಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಅಡಿಕೆ ಸಿಗಲಿಲ್ಲ.
70 ಸಾವಿರ ರೂ ಮೌಲ್ಯದ 250ಕೆಜಿ ಸಿಪ್ಪೆಸಹಿತ ಅಡಿಕೆ ಕಳ್ಳರು ದೋಚಿರುವ ಬಗ್ಗೆ ಅವರು ಪೊಲೀಸ್ ದೂರು ನೀಡಿದರು. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯವರು ಕಳ್ಳನ ಹುಡುಕುವ ಭರವಸೆ ನೀಡಿದರು.
