ಕಾರವಾರ ನಗರದಲ್ಲಿ ಪದೇ ಪದೇ ರಸ್ತೆ ಮೇಲೆ ಮರ ಬೀಳುತ್ತಿದೆ. ಪರಿಣಾಮ ಒಂದಲ್ಲ ಒಂದು ಅನಾಹುತ ನಡೆಯುತ್ತಿದೆ. ಭಾನುವಾರ ಆಸ್ಪತ್ರೆಗೆ ಬಂದಿದ್ದ ಮಹಿಳೆಯೊಬ್ಬರ ಮೇಲೆ ಮರ ಬಿದ್ದಿದ್ದು, ಅವರು ಸಾವನಪ್ಪಿದ್ದಾರೆ.
ಮಲ್ಲಾಪುರದ ಲಕ್ಷ್ಮೀ ಮಮ್ತೇಕರ್ ಎಂಬಾತರು ಭಾನುವಾರ ಕಾರವಾರಕ್ಕೆ ಬಂದಿದ್ದರು. ಲಕ್ಷ್ಮೀ ಅವರ ಜೊತೆ ಅವರ ಸೊಸೆ ಸುನಿತಾ ಸಹ ಇದ್ದರು. ಸುನಿತಾ ಅವರು ಗರ್ಭಿಣಿಯಾಗಿದ್ದರಿಂದ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಲಕ್ಷ್ಮೀ ಅವರು ಕಾರಿನಲ್ಲಿದ್ದು, ಮರವೊಂದು ಕಾರಿನ ಮೇಲೆ ಬಿದ್ದಿತು.
ಕಾರಿನ ಅಡಿ ಸಿಲುಕಿದ್ದ ಕಾರನ್ನು ಹೊರ ತೆಗೆಯಲು ಅನೇಕರು ಸಾಹಸ ಮಾಡಿದರು. ಆದರೆ, ಲಕ್ಷ್ಮೀ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪಿಕಳೆ ರಸ್ತೆಯಲ್ಲಿದ್ದ ಮರ ಬಿದ್ದ ಪರಿಣಾಮ ಮಹಿಳೆ ಗಾಯಗೊಂಡಿದ್ದು, ಆಸ್ಪತ್ರೆಗೆ ಹೋದ ಸುನಿತಾ ಹೊರಬರುವಷ್ಟರಲ್ಲಿ ದುರಂತ ನಡೆದಿತ್ತು.
ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಹೊರತೆಗೆದರು. ಆಸ್ಪತ್ರೆಗೆ ಸಾಗಿಸುವಷ್ಟರೊಳಗೆ ಅವರು ಸಾವನಪ್ಪಿದ್ದರು. ಕೆಲ ದಿನಗಳ ಹಿಂದೆಯೂ ಕಾರವಾರದಲ್ಲಿ ಮರವೊಂದು ಸ್ಕೂಟಿ ಮೇಲೆ ಬಿದ್ದು, ಬಾಲಕಿಯೊಬ್ಬರು ಗಾಯಗೊಂಡಿದ್ದರು.
ಭಾನುವಾರ ದೊಡ್ಡ ಮರ ರಸ್ತೆ ತುಂಬ ಬಿದ್ದು ಹರಡಿಕೊಂಡಿದ್ದರಿoದ ಸಂಚಾರ ದಟ್ಟಣೆಯೂ ಉಂಟಾಯಿತು. ಮರ ತೆರವು ಕಾರ್ಯಾಚರಣೆ ಮುಂದುವರೆದಿದೆ.
