ಯಲ್ಲಾಪುರದ ಮಾವಿನಕಟ್ಟಾದ ಸರ್ಕಾರಿ ಆಸ್ಪತ್ರೆ ಹಿಂದೆ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ 7 ಜನ ಸಿಕ್ಕಿ ಬಿದ್ದಿದ್ದು, ಇಬ್ಬರು ಓಡಿ ಪರಾರಿಯಾಗಿದ್ದಾರೆ.
ಜುಲೈ 20ರಂದು ಮಾವಿನಕಟ್ಟಾದ ಹರೀಶ ಗಣಪತಿ ನಾಯ್ಕ, ಲಂಬೋದರ ದೇವಪ್ಪ ನಾಯ್ಕ, ನಾಗರಾಜ ಶಂಕರ ದೇವಾಡಿಗ, ರಾಜೇಂದ್ರ ಮಂಜುನಾಥ ದೇವಾಡಿಗ ಅಂದರ್ ಬಾಹರ್ ಆಡುತ್ತಿದ್ದರು. ಸಂತೋಷ ನಾರಾಯಣ ನಾಯ್ಕ, ಓಮು ವೆಂಕಟ ಗೌಡ, ಮಂಜುನಾಥ ಸುಕ್ರು ದೇವಾಡಿಗ ಸಹ ಅವರ ಜೊತೆಯಿದ್ದರು. ಪೊಲೀಸರ ದಾಳಿಯಲ್ಲಿ ಅವರೆಲ್ಲರೂ ಸಿಕ್ಕಬಿದ್ದರು.
ಅವರ ಬಳಿಯಿದ್ದ 27840ರೂ ಹಣ, ಇಸ್ಪಿಟ್ ಎಲೆ ಜೊತೆ ಸ್ಥಳದಲ್ಲಿದ್ದ ನ್ಯೂಸ್ ಪೆಪರನ್ನು ಸಾಕ್ಷಿಯಾಗಿ ಪೊಲೀಸರು ಸಂಗ್ರಹಿಸಿದರು. ಈ ವೇಳೆ ಅಲ್ಲಿದ್ದ ಬೆಳ್ಳಂಬಿಯ ಗಜಾನನ ಮರಾಠಿ ಹಾಗೂ ಬಿಸ್ಲಕೊಪ್ಪದ ಗಣಪತಿ ರಾಮಾ ಗೌಡ ಓಡಿ ಪರಾರಿಯಾದರು. ಅದಾಗಿಯೂ, ಪೊಲೀಸರು ಅವರ ಹೆಸರು-ವಿಳಾಸ ಹುಡುಕಿ ಪ್ರಕರಣ ದಾಖಲಿಸಿದರು.
