ಸಿದ್ದಾಪುರದ ರಾಜಶೇಖರ್ ಮಡಿವಾಳ ಅವರ ಮನೆ ಅಗ್ನಿ ಅವಘಡದಿಂದ ಕರಕಲಾಗಿದ್ದು, ಈ ವಿಷಯ ತಿಳಿದ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಅಲ್ಲಿಗೆ ಭೇಟಿ ನೀಡಿದರು. ಸಂತ್ರಸ್ತ ಕುಟುಂಬಕ್ಕೆ ಸ್ವಾಂತ್ವಾನ ಹೇಳಿದ ಅವರು ಹಣ ಸಹಾಯ ಮಾಡಿದರು.
ಸಿದ್ದಾಪುರ ತಾಲೂಕಿನ ಶಿರಳಗಿ ಪಂಚಾಯತ್ ವ್ಯಾಪ್ತಿಯ ಬಿಕ್ಕಲಸೆ ಗ್ರಾಮದ ರಾಜಶೇಖರ್ ಮಡಿವಾಳ ಅವರ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ವಿದ್ಯುತ್ ಶಾರ್ಟ ಸರ್ಕೀಟ್ ಪರಿಣಾಮ ಅವರ ಮನೆಗೆ ಬೆಂಕಿ ಬಿದ್ದಿದೆ. ಇದರಿಂದ ಮನೆಯ ದಿನನಿತ್ಯ ಬಳಸುವ ಪಾತ್ರೆ, ಬಟ್ಟೆಗಳೆಲ್ಲವೂ ಸುಟ್ಟಿವೆ.
`ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಭೇಟಿ ನೀಡಿ ಸಹಾಯ ಮಾಡಿರುವುದು ಸಂತೋಷ. ಇದರೊಂದಿಗೆ ಪೂರ್ಣ ಮನೆ ನಿರ್ಮಾಣಕ್ಕೆ ಅನುದಾನ ಕಲ್ಪಿಸಬೇಕು’ ಎಂದು ಅನಂತಮೂರ್ತಿ ಹೆಗಡೆ ಹೇಳಿದ್ದಾರೆ. `ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮನೆಗೆ ಹಾನಿ ಸಂಭವಿಸಿದಾಗ ಸರಕಾರದಿಂದ ಅನುದಾನ ನೀಡುತ್ತಿದ್ದರು. ಕನಿಷ್ಟ 5 ಲಕ್ಷ ರೂ ಆದರೂ ವಿಶೇಷ ಪರಿಹಾರ ಕೊಡಿಸಬೇಕು’ ಎಂದು ಅವರು ಆಗ್ರಹಿಸಿದರು.