ಭಟ್ಕಳದ ಮಾರಿಕೇರಿ ಅಂಚೆ ಕಚೇರಿಯಲ್ಲಿ ಕಳ್ಳತನ ನಡೆದಿದೆ. ಅಂಚೆ ಕಚೇರಿಯ ಕಪಾಟಿನಲ್ಲಿದ್ದ 16 ಸಾವಿರ ರೂ ಹಣವನ್ನು ಕಳ್ಳರು ದೋಚಿದ್ದಾರೆ.
ಈ ಬಗ್ಗೆ ಅಂಚೆ ನೌಕರರಾದ ಮಾಸ್ತಿ ಗೊಂಡ ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾಸ್ತಿ ಗೊಂಡ ಅವರ ದೂರಿನ ಪ್ರಕಾರ, ಜುಲೈ 22ರಂದು ಅವರು ಅಂಚೆ ಕಚೇರಿಯ ವ್ಯವಹಾರ ನೋಡಿಕೊಂಡಿದ್ದರು. ಆ ದಿನ ಮಧ್ಯಾಹ್ನ ಎಲ್ಲಾ ವಹಿವಾಟು ಮುಗಿಸಿ ಬಾಕಿ ಮೊತ್ತವನ್ನು ಕಪಾಟಿನಲ್ಲಿರಿಸಿದ್ದರು.
ಅದಾದ ನಂತರ ಮಾಸ್ತಿ ಗೊಂಡ ಅವರು ಮನೆಗೆ ಹೋಗಿದ್ದು, ಮರುದಿನ ಅಂಚೆ ಕಚೇರಿಗೆ ಬಂದಾಗ ಬಾಗಿಲು ಒಡೆದಿತ್ತು. ಹೀಗಾಗಿ ಕಪಾಟಿನಲ್ಲಿದ್ದ 16 ಸಾವಿರ ರೂ ಹಣ ಕಾಣೆಯಾಗಿತ್ತು. ಕಚೇರಿ ಬಾಗಿಲು ಮುರಿದು ಕಳ್ಳತನ ಮಾಡಿದವರನ್ನು ಹುಡುಕಿ ಎಂದು ಅವರು ಪೊಲೀಸರ ಬಳಿ ಕೇಳಿಕೊಂಡಿದ್ದಾರೆ.
