ಸೂರತ್ಕಲ್’ಲಿ ಬಿ ಟೆಕ್ ಓದುತ್ತಿದ್ದ ಕಾರವಾರದ ರಕ್ಷಾ ನಾಯಕ ಅವರು ಪರೀಕ್ಷೆಯಲ್ಲಿ ಪಾಸಾಗದ ಕಾರಣ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಜೀವನದಲ್ಲಿ ಸಾಧಿಸುವುದು ಸಾಕಷ್ಟಿದ್ದರೂ ಅದನ್ನು ಲೆಕ್ಕಿಸದೇ ಅವರು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.
ರಕ್ಷಾ ನಾಯಕ ಅವರು ಕಾರವಾರ ತಾಲೂಕು ವೈದ್ಯಾಧಿಕಾರಿ ಸರೀಜಾ ನಾಯಕ್ ಅವರ ಪುತ್ರಿ. ರಕ್ಷಾ ನಾಯಕ ಅವರು ಬಾಲ್ಯದಿಂದಲೂ ಪ್ರತಿಭಾನ್ವಿತರಾಗಿದ್ದರು. ಎಲ್ಲಾ ಕಡೆ ಉತ್ತಮ ಅಂಕಪಡೆದು ಪಾಸಾಗುತ್ತಿದ್ದರು. ಸದ್ಯ ಸುರತ್ಕಲ್ನ ಎನ್ಐಟಿಕೆಯಲ್ಲಿ ಬಿ ಟೆಕ್ ವ್ಯಾಸಂಗ ಮಾಡುತ್ತಿದ್ದರು.
ಪರೀಕ್ಷೆ ಎದುರಿಸಿದ ನಂತರ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಅವರಿಗೆ ಅನುತ್ತೀರ್ಣರಾಗಿರುವ ಸುದ್ದಿ ಕೇಳಿ ಆಘಾತವಾಯಿತು. ಒಂದು ವಿಷಯದಲ್ಲಿ ರಕ್ಷಾ ನಾಯಕ ಪೇಲಾಗಿದ್ದು, ಚಿಂತೆಯಲ್ಲಿದ್ದರು. ಮನೆಯಲ್ಲಿ ಸಹ ರಕ್ಷಾ ನಾಯಕ ಅವರಿಗೆ ಬುದ್ದಿವಾದ ಹೇಳಿದ್ದರಿಂದ ಮಾನಸಿಕವಾಗಿ ಇನ್ನಷ್ಟು ಕುಗ್ಗಿದರು.
ಅದೇ ನೋವಿನಲ್ಲಿ ರಕ್ಷಾ ನಾಯಕ ಆತ್ಮಹತ್ಯೆಗೆ ಶರಣಾದರು. ಪೊಲೀಸರು ಸ್ಥಳಪರಿಶೀಲನೆ ಮಾಡಿದ್ದಾರೆ.
