• Latest
If a house collapses due to rain compensation of three paise is given Encroachers don't even get that!

ಮಳೆಯಿಂದ ಮನೆ ಮುರಿದು ಬಿದ್ದರೆ ಮೂರು ಕಾಸಿನ ಪರಿಹಾರ: ಅತಿಕ್ರಮಣದಾರರಿಗೆ ಅದೂ ಇಲ್ಲ!

3 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Saturday, October 18, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಮಳೆಯಿಂದ ಮನೆ ಮುರಿದು ಬಿದ್ದರೆ ಮೂರು ಕಾಸಿನ ಪರಿಹಾರ: ಅತಿಕ್ರಮಣದಾರರಿಗೆ ಅದೂ ಇಲ್ಲ!

ಗುಡ್ಡಗಾಡು ಪ್ರದೇಶ ಹೊಂದಿದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಅತಿಕ್ರಮಿಸಿಕೊಂಡು ಮನೆ ನಿರ್ಮಿಸಿಕೊಂಡವರೇ ಹೆಚ್ಚು. ಕೆಲವರು ಸೊಪ್ಪಿನ ಬೆಟ್ಟದಲ್ಲಿ ಮನೆ ಕಟ್ಟಿಕೊಂಡಿದ್ದರೂ ಆ ಭೂಮಿಯ ಹಕ್ಕು ಅವರದಲ್ಲ. ಹೀಗಾಗಿ ಮನೆ ಕುಸಿತ ಪ್ರಕರಣದಲ್ಲಿ ಫಲಾನುಭವಿಗಳಿಗೆ ಪೂರ್ಣ ಪ್ರಮಾಣದ ಪರಿಹಾರ ಸಿಗುತ್ತಿಲ್ಲ.

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
If a house collapses due to rain compensation of three paise is given Encroachers don't even get that!
ADVERTISEMENT

ವರ್ಷದಿಂದ ವರ್ಷಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗುತ್ತಿದೆ. ಪರಿಣಾಮ ಮಳೆ ಅನಾಹುತಗಳ ಸಂಖ್ಯೆಯೂ ಅಧಿಕವಾಗಿದೆ. ನಿತ್ಯ ಹತ್ತಾರು ಮನೆ ಕುಸಿತದ ವರದಿ ಸರ್ಕಾರದ ಕಡತ ಸೇರುತ್ತಿದೆ. ಆದರೆ, ಮಳೆಯಿಂದ ಮನೆ ಕಳೆದುಕೊಳ್ಳುವವರಿಗೆ ಸರ್ಕಾರದಿಂದ ಪೂರ್ಣ ಪ್ರಮಾಣದ ಪರಿಹಾರ ಮಾತ್ರ ಸಿಗುತ್ತಿಲ್ಲ. ಕಾರಣ ಮನೆಯಿದ್ದ ಭೂಮಿ ಅತಿಕ್ರಮಣ!

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣ ಹಾಗೂ ಸೊಪ್ಪಿನ ಬೆಟ್ಟದಲ್ಲಿ ಮನೆ ನಿರ್ಮಿಸಿಕೊಂಡವರೇ ಅಧಿಕವಿದ್ದಾರೆ. ಶೇ 50ಕ್ಕೂ ಅಧಿಕ ಮನೆಗಳು ಅಕ್ರಮ ಪಟ್ಟಿಯಲ್ಲಿವೆ. ಹಲವು ಮನೆಗಳು ಅಪಾಯದ ಅಂಚಿನಲ್ಲಿದ್ದು, ಮಳೆಗಾಲದ ಅವಧಿಯಲ್ಲಿ ಮನೆ ಖಾಲಿ ಮಾಡುವಂತೆ ನೋಟಿಸ್ ಸಹ ನೀಡಲಾಗಿದೆ. ಜೊತೆಗೆ ಅನಾಧಿಕಾಲದ ಮನೆಗಳು ಇದೀಗ ಕುಸಿತ ಕಾಣುತ್ತಿದ್ದು, ಜನ ಆಸರೆಗಾಗಿ ಅಂಗಲಾಚುತ್ತಿದ್ದಾರೆ. ಮೊದಲು ಪೂರ್ಣ ಪ್ರಮಾಣದಲ್ಲಿ ಮನೆ ಬಿದ್ದರೆ 5 ಲಕ್ಷ ರೂ ಪರಿಹಾರ ಸಿಗುತ್ತಿತ್ತು. ಆದರೆ, ಇದೀಗ ಪೂರ್ಣ ಮನೆ ಬಿದ್ದರೂ ಸರ್ಕಾರದಿಂದ 1.20 ಲಕ್ಷ ರೂ ಮಾತ್ರ ಸಿಗುತ್ತಿದೆ. ಅತಿಕ್ರಮಣ ಪ್ರದೇಶದಲ್ಲಿನ ಮನೆ ಬಿದ್ದರೆ ಸರ್ಕಾರದಿಂದ ಸಿಗುವ ಸಾಂತ್ವಾನ ಮೂರು ಕಾಸಿಗೂ ಪ್ರಯೋಜನಕ್ಕಿಲ್ಲ.

ADVERTISEMENT

ಭೂಮಿ ಇಲ್ಲದೇ ಕೂಲಿ ಮಾಡುವ ಜನ ಅನಿವಾರ್ಯವಾಗಿ ಅತಿಕ್ರಮಣ ಪ್ರದೇಶದಲ್ಲಿ ವಾಸವಾಗಿದ್ದು, ಅನೇಕ ಮನೆಗಳಿಗೆ ತೆರಳಲು ಈಗಲೂ ರಸ್ತೆಯಿಲ್ಲ. ಧರೆ ಅಂಚಿನ ಮನೆಗಳ ಪರಿಸ್ಥಿತಿಯಂತೂ ಶೋಚನೀಯ. ಧರೆ ಬಿದ್ದರೆ ಅಲ್ಲಿನವರಿಗೆ ಬದುಕು ಕಟ್ಟಿಕೊಳ್ಳಲು ಬೇರೆ ಜಾಗವೂ ಸಿಗುತ್ತಿಲ್ಲ. ಹೊಸ ಅತಿಕ್ರಮಣಕ್ಕೂ ಇದೀಗ ಅವಕಾಶವಿಲ್ಲ. ಮನೆ ಮರು ನಿರ್ಮಾಣಕ್ಕೆ 1.20 ಲಕ್ಷ ಸಾಲುತ್ತಿಲ್ಲ ಎಂಬುದು ಒಂದು ನೋವಾದರೆ ಹೊಸ ಮನೆ ನಿರ್ಮಾಣಕ್ಕೆ ಅತಿಕ್ರಮಣದಾರರಿಗೆ ಜಾಗ ಸಿಗುತ್ತಿಲ್ಲ ಎಂಬುದು ಇನ್ನೊಂದು ಕೊರಗು. ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಈ ನಿಯಮಾವಳಿ ಸಡಿಲಗೊಳಿಸಬೇಕು ಎಂಬ ಒತ್ತಾಯ ಸಹ ಇಂದು ನಿನ್ನೆಯದಲ್ಲ. ಆದರೆ, ಆ ಸಡಲಿಕೆಗೆ ಈವರೆಗೂ ಸಮಯ ಕೂಡಿಬಂದಿಲ್ಲ.

ADVERTISEMENT

Discussion about this post

Previous Post

ಸೋರುವ ಬಸ್ ನಿಲ್ದಾಣ: ದುರಸ್ಥಿಗೆ ಆಗ್ರಹ

Next Post

ಮಂಗನ ಕಾಟಕ್ಕೆ ಬಾಲಕ ಬಲಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋