`ಕುಮಟಾ ಗ್ರಾಮೀಣ ಭಾಗದ ಬಸ್ ನಿಲ್ದಾಣಗಳು ಶಿಥಿಲಾವ್ಯವಸ್ಥೆ ತಲುಪಿದ್ದು, ಅದನ್ನು ದುರಸ್ಥಿ ಮಾಡಬೇಕು’ ಎಂದು ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ. ಈ ಬಗ್ಗೆ ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರಿಗೆ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಸ್ ಮನವಿ ಸಲ್ಲಿಸಿದ್ದಾರೆ.
`ಕುಮಟಾದ ಹಲವು ಕಡೆ ಬಸ್ ನಿಲ್ದಾಣ ಶಿಥಿಲಗೊಂಡಿದೆ. ಮಳೆಗಾಲದಲ್ಲಿ ಕಟ್ಟಡ ಸೋರುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. 50 ವರ್ಷ ಹಳೆ ಬಸ್ ನಿಲ್ದಾಣಗಳು ಸಹ ಇಲ್ಲಿವೆ’ ಎಂದು ಅವರು ವಿವರಿಸಿದರು.
`ಬರ್ಗಿ, ಕಿಮಾನಿ, ಹೆಗಡೆ, ಅಘನಾಶಿನಿ, ಕಾಗಲ, ಗುಡ್ ಕಾಗಲ್ ಮೊಸಳೆ ಸಾಲ ಮೊದಲಾದ ಊರುಗಳಲ್ಲಿನ ಬಸ್ ನಿಲ್ದಾಣ ಬಿರುಕು ಬಿಟ್ಟಿದೆ. ನಿಲ್ದಾಣದ ಮೇಲ್ಚಾವಣಿ ಒಡೆದಿದೆ. ಬಸ್ಸಿಗಾಗಿ ಕಾಯುವ ಪ್ರಯಾಣಿಕರ ಮೇಲೆ ಬಸ್ ನಿಲ್ದಾಣದ ಮೇಲ್ಚಾವಣಿ ಕುಸಿಯುವ ಆತಂಕವಿದೆ’ ಎಂದವರು ಹೇಳಿದರು.
`ಭವಿಷ್ಯದಲ್ಲಿ ಆಗಬಹುದಾದ ಅಪಾಯ ತಪ್ಪಿಸಲು ಕೂಡಲೇ ಬಸ್ ನಿಲ್ದಾಣ ದುರಸ್ಥಿ ನಡೆಸಬೇಕು’ ಎಂದು ಈ ವೇಳೆ ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಒತ್ತಾಯಿಸಿದರು.
Discussion about this post