ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಅದರ ಪರಿಣಾಮ ಶಿರಸಿ-ಕುಮಟಾ ರಸ್ತೆಯ ದೇವಿಮನೆ ಘಟ್ಟದಲ್ಲಿ ಭೂ ಕುಸಿತ ಉಂಟಾಗಿದೆ.
ದೇವಿಮನೆ ಘಟ್ಟ ಪ್ರದೇಶದ ಕ್ಷೇತ್ರಪಾಲ ದೇವಾಲಯದ ಬಳಿಯೇ ಈ ಕುಸಿತವಾಗಿದೆ. ಮಳೆ ಮುಂದುವರೆದರೆ ಇನ್ನಷ್ಟು ಕುಸಿಯುವ ಸಾಧ್ಯತೆ ಇಲ್ಲಿದೆ. ಕುಸಿತ ಹೆಚ್ಚಾದರೆ ಈ ರಸ್ತೆ ಸಂಚಾರ ನಿಷೇಧವನ್ನು ಅಲ್ಲಗಳಿಯುವ ಹಾಗಿಲ್ಲ.
ಕಳೆದ ಒಂದು ವಾರದಿಂದ ದೇವಿಮನೆ ಘಟ್ಟ ಹಾಗೂ ಸುತ್ತಲಿನ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಸದ್ಯ ಕುಸಿತದ ತೀವೃತೆಗೆ ರಸ್ತೆಗೆ ಹಾಕಲಾಗಿದ್ದ ಸಿಮೆಂಟ್ ಕಿತ್ತು ಬಿದ್ದಿದೆ. ಹೊಸದಾಗಿ ರಸ್ತೆಗೆ ಅಳವಡಿಸಿದ್ದ ಸಿಮೆಂಟ್ ಸಹ ಕಿತ್ತು ಹೋಗಿದೆ.
ಕಳೆದ ಕೆಲ ವರ್ಷಗಳಿಂದ ಈ ಭಾಗದಲ್ಲಿ ಪದೇ ಪದೇ ಭೂ ಕುಸಿತವಾಗುತ್ತಿದೆ. ತಿಂಗಳ ಹಿಂದೆ ಭಾರೀ ಪ್ರಮಾಣದ ಮರ ಮಣ್ಣಿನ ಜೊತೆ ರಸ್ತೆಗೆ ಅಪ್ಪಳಿಸಿತ್ತು. ಇಲ್ಲಿನ ಕುಸಿತದ ಬಗ್ಗೆ ವಿಜ್ಞಾನಿಗಳು ಅಧ್ಯಯನವನ್ನು ನಡೆಸಿದ್ದು, ಮಣ್ಣಿನ ಪದರ ಸಡಿಲವಾಗುತ್ತಿರುವುದು ಕುಸಿತಕ್ಕೆ ಕಾರಣ ಎಂದಿದ್ದಾರೆ.
