ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಯಲ್ಲಾಪುರ ಬಿಜೆಪಿ ಘಟಕ ನಿವೃತ್ತ ಯೋಧರಿಗೆ ಗೌರವಿಸಿದೆ. ದೇಶ ಸೇವೆ ನಡೆಸಿ ಊರಿಗೆ ಮರಳಿದ ತುಳಸಿದಾಸ ನಾಯ್ಕ ಅವರು ಬಿಜೆಪಿಯ ಗೌರವ ಸ್ವೀಕರಿಸಿದರು.
ಶನಿವಾರ ಟಿಎಂಎಸ್ ಸಭಾ ಭವನದಲ್ಲಿ ಬಿಜೆಪಿಗರು ಕಾರ್ಯಕಾರಣಿ ಸಭೆ ನಡೆಸಿದರು. ಈ ವೇಳೆ ದೇಶಕ್ಕೆ ಯೋಧರ ಕೊಡುಗೆ ಹಾಗೂ ಯೋಧರಿಗಿರುವ ಮನ್ನಣೆಯ ಬಗ್ಗೆ ಮಾತನಾಡಿದರು.
ಕಾರ್ಗಿಲ ವಿಜಯೋತ್ಸವದ ಅಂಗವಾಗಿ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಭಾಷಣ ಮಾಡಿದರು. ಚಂದ್ರಕಲಾ ಭಟ್ಟ ಅವರು ರಾಷ್ಟ್ರಭಿಮಾನ, ಯೋಧ ಮತ್ತು ದೇಶದ ನಾಯಕತ್ವದ ಬಗ್ಗೆ ವಿವರಿಸಿದರು. ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಸಂಘಟನಾತ್ಮಕ ಅಭಿಯಾನದ ವರದಿ ಮಂಡಿಸಿದರು.
ಬಿಜೆಪಿಯ ನಿಕಟಪೂರ್ವ ತಾಲೂಕು ಅಧ್ಯಕ್ಷ ಜಿ ಎನ್ ಗಾಂವ್ಕರ, ಪ್ರಮುಖರಾದ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ರಾಘವೇಂದ್ರ ಭಟ್ಟ, ಶ್ರುತಿ ಹೆಗಡೆ, ನಟರಾಜ ಗೌಡ ಮತ್ತು ರವಿ ಕೈಟ್ಕರ ಇದ್ದರು.
