ಬೆಳಗ್ಗೆ ಬೇಗ ಎದ್ದು ಪಾತಿ ದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದ ಹರೀಶ ಖಾರ್ವಿ ದೋಣಿಯಲ್ಲಿ ಮೂರ್ಚೆ ಹೋಗಿದ್ದು, ಆಸ್ಪತ್ರೆಗೆ ತರುವ ಮುನ್ನ ಸಾವನಪ್ಪಿದ್ದಾರೆ. ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಅವರ ಶವದ ಮರಣೋತ್ತರ ಪರೀಕ್ಷೆ ನಡೆದಿದೆ.
ಭಟ್ಕಳ ಮಾವಿನಕೂರ್ವೆಯ ಹರೀಶ ಖಾರ್ವಿ ಅವರು ಮೀನುಗಾರಿಕೆ ಮಾಡಿ ಬದುಕು ಕಂಡುಕೊAಡಿದ್ದರು. ಜುಲೈ 28ರ ಬೆಳಗ್ಗೆ 5 ಗಂಟೆಗೆ ಎದ್ದು ಅವರು ಮೀನುಗಾರಿಕೆಗೆ ಹೋಗಿದ್ದರು. ತಮ್ಮ ಪಾತಿದೋಣಿ ಮೂಲಕ ಮೀನು ಹಿಡಿಯುತ್ತಿದ್ದ ಅವರು ದೋಣಿಯಲ್ಲಿಯೇ ಮೂರ್ಚೆ ಹೋದರು.
ಅದಾದ ನಂತರ ಇತರೆ ಮೀನುಗಾರರು ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಹರೀಶ ಖಾರ್ವಿ ಅವರನ್ನು ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ಬರುವ ಮುನ್ನವೇ ಅವರು ಸಾವನಪ್ಪಿದ ಬಗ್ಗೆ ಘೋಷಿಸಿದರು. 46ನೇ ವಯಸ್ಸಿನಲ್ಲಿಯೇ ಹರೀಶ ಖಾರ್ವಿ ಸಾವನಪ್ಪಿದ್ದು, ಅವರ ಅಣ್ಣ ಅನೀಲ ಖಾರ್ವಿ ಪೊಲೀಸರಿಗೆ ಮಾಹಿತಿ ನೀಡಿದರು. ಭಟ್ಕಳ ಗ್ರಾಮೀಣ ಠಾಣೆ ಪೊಲಿಸರು ಪ್ರಕರಣ ದಾಖಲಿಸಿಕೊಂಡರು.
