ಭಟ್ಕಳದ ಉತ್ತರಕೊಪ್ಪ ಬಿಡಕ್ಕಿ ಬೈಲ್ ಅರಣ್ಯ ಪ್ರದೇಶದಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಅರಿತ ಪೊಲೀಸರು ಅಲ್ಲಿ ದಾಳಿ ನಡೆಸಿದ್ದು, ಕೋಳಿ ಜೊತೆ ಜೂಜುಕೋರರ ಬೈಕುಗಳನ್ನು ವಶಕ್ಕೆಪಡೆದಿದ್ದಾರೆ.
ಮುರುಡೇಶ್ವರ ಠಾಣೆಯ ಪೋಲಿಸ ಉಪನೀರಿಕ್ಷಕ ಹಣಮಂತ ಬಿರಾದಾರ ಅವರಿಗೆ ಕೋಳಿ ಅಂಕದ ಬಗ್ಗೆ ಮಾಹಿತಿ ಬಂದಿತು. ಹೀಗಾಗಿ ಅವರು ತಮ್ಮ ಪಡೆ ಕಟ್ಟಿಕೊಂಡು ಕಾಡಿನೊಳಗೆ ಪ್ರವೇಶಿಸಿದರು. ಅಲ್ಲಿ ಶನಿಯಾರ ನಾಯ್ಕ, ರಾಘವೇಂದ್ರ ನಾಯ್ಕ, ಗಣಪತಿ ನಾಯ್ಕ ಎಂಬಾತರು ಕೋಳಿ ಕಾಳಗ ನಡೆಸಿ ಜೂಜಾಡುತ್ತಿದ್ದರು.
ಪೊಲೀಸರನ್ನು ನೋಡಿ ಜೂಜುಕೋರರು ಪರಾರಿಯಾಗಿದ್ದು, ಅಲ್ಲಿದ್ದ 1200ರೂ ಹಣ, 6 ಕೋಳಿ ಹಾಗೂ 4 ಬೈಕುಗಳನ್ನು ಪೊಲೀಸರು ಜಪ್ತು ಮಾಡಿದರು. ಪೋಲಿಸ ಠಾಣೆಯ ಸಿಬ್ಬಂದಿ ಸುರೇಂದ್ರ ಅಲಗೇರಿಕರ್, ಸಂಗಪ್ಪ ಹರಿಜನ, ಮಹೇಶ ಸಮನಳ್ಳಿ, ವಿಜಯ ನಾಯ್ಕ, ಯೋಗೇಶ ನಾಯ್ಕ ಈ ಕಾರ್ಯಾಚರಣೆಯಲ್ಲಿದ್ದರು.
