ಮನೆ ಮೇಲಿದ್ದ ಸಿಂಟೆಕ್ಸ ನೀರು ಖಾಲಿಯಾದ ಕಾರಣ ಪಂಪ್ ಚಾಲು ಮಾಡಲು ಹೋಗಿದ್ದ ಯುವಕನಿಗೆ ವಿದ್ಯುತ್ ಶಾಕ್ ತಗುಲಿದ್ದು, ಕುಮಟಾದ ಚೇತನ ಪಟಗಾರ್ ಅಲ್ಲಿಯೇ ಸಾವನಪ್ಪಿದ್ದಾರೆ.
ಕುಮಟಾದ ಮಿರ್ಜಾನ್ ಬಳಿಯ ಎತ್ತಿನಬೈಲಿನಲ್ಲಿ ಚೇತನ ಪಟಗಾರ (19) ವಾಸವಾಗಿದ್ದರು. ಅವರು ಗ್ಯಾರೇಜಿನಲ್ಲಿ ಕೆಲಸ ಮಾಡಿಕೊಂಡಿದ್ದು, ಅಲ್ಪ-ಸ್ವಲ್ಪ ವಿದ್ಯುತ್ ಬಗ್ಗೆಯೂ ಅರಿವುಪಡೆದಿದ್ದರು. ಆದರೆ, ಪಂಪ್ ಚಾಲು ಮಾಡಿದ ನಂತರ ಪಂಪ್ಸೆಟ್’ಗೆ ಹೋಗಿದ್ದ ವಿದ್ಯುತ್ ತಂತಿ ತುಂಡಾಗಿ ಅವರ ಮೇಲೆ ಬಿದ್ದು ಕೊನೆಯುಸಿರೆಳೆದರು.
ಜುಲೈ 29ರಂದು ಮಧ್ಯಾಹ್ನ ಮನೆ ಮೇಲಿರುವ ಸಿಂಟೆಕ್ಸ ನೀರು ಖಾಲಿ ಆಗಿರುವುದು ಚೇತನ ಪಟಗಾರ ಅವರ ಗಮನಕ್ಕೆ ಬಂದಿತು. ಪಂಪಿನಿoದ ನೀರು ಬಿಡಲು ಕರೆಂಟ್ ಸ್ವಿಚ್ ಹಾಕಿದ ಅವರು ಮನೆ ಹಿಂಬಾಗಿಲಿನಿAದ ಹೊರ ಹೋದರು. ಅಲ್ಲಿ ತುಂಡಾಗಿ ಬಿದ್ದಿದ್ದ ಪಂಪ್ ಸೆಟ್ ವೈಯರ್ ಅವರ ಜೀವ ತೆಗೆಯಿತು.
ಆನಂದ ಪಟಗಾರ ಅವರು ನೀಡಿದ ಮಾಹಿತಿ ಮೇರೆಗೆ ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
