ಭಟ್ಕಳದ ಅಳ್ವೆಕೊಡಿ ಬಳಿ ನಡೆದ ದೋಣಿ ದುರಂತದಲ್ಲಿ ಅರಬ್ಬಿ ಸಮುದ್ರಕ್ಕೆ ಕೊಚ್ಚಿ ಹೋಗಿದ್ದ ನಾಲ್ವರು ಮೀನುಗಾರರಲ್ಲಿ ಮೂವರ ಶವ ಸಿಕ್ಕಿದೆ. ಶನಿವಾರ ಇಬ್ಬರ ಶವ ಸಿಕ್ಕಿದ್ದು, ಮತ್ತೊಬ್ಬರ ಹುಡುಕಾಟ ಮುಂದುವರೆದಿದೆ.
ಜುಲೈ 30ರಂದು ಭಟ್ಕಳದ ತೆಂಗಿನಗುoಡಿಯಿoದ ಮೀನುಗಾರರು ಮೀನುಗಾರಿಕೆಗೆ ಹೋಗಿದ್ದಾಗ ದೋಣಿ ಪಲ್ಟಿಯಾಗಿತ್ತು. ನಾಲ್ವರು ಮೀನುಗಾರರು ಕಾಣೆಯಾಗಿದ್ದು, ಈರಯ್ಯ ಮೊಗೇರ ಹಾಗೂ ರಾಮ ಮಾಸ್ತಿ ಖಾರ್ವಿ ಈಜಿ ದಡ ಸೇರಿದ್ದರು. ಅದೇ ದಿನ ರಾಮಕೃಷ್ಣ ಮೊಗೇರ್ ಎಂಬಾತರ ಶವ ಪತ್ತೆಯಾಗಿತ್ತು.
ಉಳಿದವರ ಹುಡುಕಾಟ ನಡೆಸಿದಾಗ ಶನಿವಾರ ಗಂಗೊಳ್ಳಿ ಸಮೀಪದ ಸಮುದ್ರದಲ್ಲಿ ನಿಶ್ಚಿತ್ ಮೊಗೇರ್ ಹಾಗೂ ಗಣೇಶ್ ಮೊಗೇರ್ ಅವರ ಶವ ಕಾಣಿಸಿದೆ. ಸದ್ಯ ಮುಳುಗು ತಜ್ಞ ಈಶ್ವರ ಮಲ್ಪೆ ತಂಡದಿAದ ಶೋಧ ನಡೆಯುತ್ತಿದೆ.
