ಶಿರಸಿಯ ಗಣೇಶ ನಾಯ್ಕ ಅವರು ಓಡಿಸುತ್ತಿದ್ದ ಬುಲೆರೋ ಮತ್ತಿಘಟ್ಟಾ ರಸ್ತೆಯಲ್ಲಿ ಪಲ್ಟಿಯಾಗಿದೆ. ಪರಿಣಾಮ ಗಣೇಶ ನಾಯ್ಕ ಅವರನ್ನು ಸೇರಿ ಐದು ಜನ ಪೆಟ್ಟು ಮಾಡಿಕೊಂಡಿದ್ದಾರೆ.
ಧಾರಾಕಾರವಾಗಿ ಸುರಿದ ಗಾಳಿ-ಮಳೆಗೆ ಮತ್ತಿಘಟ್ಟಾ ರಸ್ತೆಯಲ್ಲಿ ಅನೇಕ ವಿದ್ಯುತ್ ಕಂಬಗಳು ಮುರಿದಿದ್ದವು. ಅದನ್ನು ಸರಿಪಡಿಸುವುದಕ್ಕಾಗಿ ಶಿರಸಿ ಪಡಂಬೈಲ್’ನ ಗಣೇಶ ನಾಯ್ಕ ಅವರು ತಮ್ಮ ಬುಲೆರೋ ವಾಹನದಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದರು.
ಪಡಂಬೈಲ್ ನಾಗರಾಜ ಮೊಗೇರ, ಶಿವಾ ಪೂಜಾರಿ, ಶ್ರೀಧರ ಮೇದಾರ್, ಸಂದೀಪ ಪಟೇಲ್ ಮೊದಲಾದವರು ಆ ಬುಲೆರೋದಲ್ಲಿದ್ದರು. ಯಚಡಿ ಗ್ರಾಮದ ಸಂಪಿಗೆಮನೆ ಕ್ರಾಸಿನ ಬಳಿ ಬುಲೆರೋ ತೆರಳುತ್ತಿದ್ದಾಗ ಎದುರಿನಿಂದ ಏಕಾಏಕಿ ಇನ್ನೊಂದು ವಾಹನ ಬಂದಿತು. ಹೀಗಾಗಿ ಗಣೇಶ ನಾಯ್ಕ ಅವರು ಬುಲೆರೋವನ್ನು ರಸ್ತೆಯಿಂದ ಕೆಳಗಿಳಿಸಿದರು.
ಮತ್ತೆ ಮೇಲೆ ಬರುವಾಗ ಬುಲೆರೋ ಬಲಭಾಗಕ್ಕೆ ತಿರುಗಿ ಪಲ್ಟಿಯಾಯಿತು. ಪರಿಣಾಮ ಸಂದೀಪ ಪಟೇಲ್ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ನಾಗರಾಜ ಮೊಗೇರ, ಶಿವಾ ಪೂಜಾರಿ, ಶ್ರೀಧರ ಮೇದಾರ್ ಸಹ ಗಾಯಗೊಂಡರು. ಚಾಲಕ ಗಣೇಶ ನಾಯ್ಕ ಸಹ ನೋವುಂಡರು. ಈ ಅಪಘಾತಕ್ಕೆ ಅವಸರವೇ ಕಾರಣವಾಗಿದ್ದು, ನಾಗರಾಜ ಮೊಗೇರ್ ಅವರು ಗಣೇಶ ನಾಯ್ಕ ವಿರುದ್ಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದರು.
