ಕಾರವಾರದ ಬಿಣಗಾ ಬಳಿ ಸ್ಕೂಟಿಗೆ ಕಾರು ಗುದ್ದಿದ್ದರಿಂದ ಸ್ಕೂಟಿ ಸವಾರನ ಸ್ಥಿತಿ ಗಂಭೀರವಾಗಿದೆ. ಅಪಘಾತದಲ್ಲಿ ಕಾರು ಜಖಂ ಆಗಿದೆ. ಸ್ಕೂಟಿಯೂ ಜಖಂ ಆಗಿದೆ.
ಕಾರವಾರದ ರಜಾಕ್ ಸಾಬ್ ಅವರು ಗೋಕರ್ಣದ ಗಂಗಾವಳಿಗೆ ಸ್ಕೂಟಿಯಲ್ಲಿ ಹೊರಟಿದ್ದರು. ಗೋವಾದಿಂದ ಕೇರಳಕ್ಕೆ ಹೊರಟಿದ್ದ ಕಾರು ಬಿಣಗಾ ಬಳಿ ಆ ಸ್ಕೂಟಿಗೆ ಡಿಕ್ಕಿಯಾಯಿತು. ಹಿಂದಿನಿAದ ಕಾರು ಗುದ್ದಿದ ರಭಸಕ್ಕೆ ಸ್ಕೂಟಿ ಜೊತೆ ರಜಾಕ್ ಸಾಬ್ ಸಹ ನೆಲಕ್ಕೆ ಅಪ್ಪಳಿಸಿದರು.
ಪರಿಣಾಮ ರಜಾಕ್ ಸಾಬ್ ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಆಗ, ಅಲ್ಲಿದ್ದ ಜನ ರಜಾಕ್ ಸಾಬ್ ಅವರಿಗೆ ಆರೈಕೆ ಮಾಡಿದರು. ತುರ್ತಾಗಿ ಅವರನ್ನು ಕಾರವಾರದ ಮೆಡಿಕಲ್ ಕಾಲೇಜಿಗೆ ದಾಖಲಿಸಿದರು. ಅಲ್ಲಿ ಚಿಕಿತ್ಸೆಪಡೆದ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಗೋವಾಗೆ ಕಳುಹಿಸಲಾಯಿತು.
