ಯಲ್ಲಾಪುರದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಗಾಂಧೀ ಸೋಮಾಪುರಕರ ಅವರ ಅವರ ಮೇಲೆ ಹಲ್ಲೆ ನಡೆದಿದೆ. ಹೊಡೆದಾಟ ತಪ್ಪಿಸಲು ಹೋದ ಗಾಂಧೀ ಅವರ ಪತ್ನಿ ಗೋಪಿಕಾ ಗಾಂಧೀ ಅವರು ಹೊಡೆತ ತಿಂದಿದ್ದಾರೆ.
ಅಗಷ್ಟ್ 3ರಂದು ಯಲ್ಲಾಪುರದ ಬೈಲಂದೂರಿನಲ್ಲಿ ಗಾಂಧೀ ಹಾಗೂ ಗೋಪಿಕಾ ಗಾಂಧೀ ಅವರು ಕೃಷಿ ಕೆಲಸ ಮಾಡುತ್ತಿದ್ದರು. ಆಗ, ಅಲ್ಲಿಗೆ ಬಂದ ನಾಲ್ವರು `ಈ ಜಮೀನಿನಿಂದ ಹೊರಗೆ ಹೋಗಿ’ ಎಂದು ಕೂಗಿದರು. ಅದಕ್ಕೆ ಗಾಂಧೀ ದಂಪತಿ ಒಪ್ಪಲಿಲ್ಲ. ಹೀಗಾಗಿ ಆ ನಾಲ್ವರು ದಂಪತಿಯನ್ನು ಹಿಡಿದು ಥಳಿಸಿದರು.
ಖಾರೆವಾಡದ ಬೊಮ್ಮು ಬಜಾರಿ ಮೊದಲು ಗಾಂಧೀ ಸೋಮಾಪುರಕರ್ ಅವರಿಗೆ ಹೊಡೆದರು. ಜೊತೆಗಿದ್ದ ಅಪ್ಪಾರಾವ್ ಬಜಾರಿ ಸಹ ಕೆನ್ನೆಗೆ ಬಾರಿಸಿದರು. ಇದನ್ನು ಬಿಡಿಸಲು ಹೋದ ಗೋಪಿಕಾ ಅವರಿಗೆ ನಕಲಿ ಬಾಯಿ ಬಜಾರಿ ಅವರು ಎರಡು ಕೆನ್ನೆಗೆ ಹೊಡೆದರು. ಅಲ್ಲಿದ್ದ ಮತ್ತೊಬ್ಬ ನಕಲಿ ಬಾಯಿ ಸಹ ಗೋಪಿಕಾ ಅವರಿಗೆ ದೂಡಿದರು.
ತಮ್ಮ ಜಮೀನಿನಲ್ಲಿ ತಾವು ಕೆಲಸ ಮಾಡುವ ವೇಳೆ ನಾಲ್ವರು ಬಂದು ಹೊರಗೆ ಹೋಗಿ ದಬಾಯಿಸಿದಲ್ಲದೇ, ಪ್ರಶ್ನಿಸಿದಕ್ಕಾಗಿ ಹೊಡೆದ ಬಗ್ಗೆ ಗೋಪಿಕಾ ಗಾಂಧೀ ಅವರು ಪೊಲೀಸ್ ದೂರು ನೀಡಿದರು. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
