ನಾಗರಿಕ ಸೇವಾ ಪರೀಕ್ಷೆಗಳಿಗೆ ಅಗತ್ಯವಿರುವ ಕೌಶಲ್ಯ ಕಲಿಸುವ ಶಿರಸಿಯ `ಸಮುತ್ಕರ್ಷ’ ಈ ಸಲ 10ನೇ ವರ್ಷದ ತರಬೇತಿ ಕಾರ್ಯಾಗಾರ ನಡೆಸಲು ಸಿದ್ಧವಾಗಿದೆ. ಐಎಎಸ್ ಅಧಿಕಾರಿಯಾಗಬೇಕು ಎಂದು ಕನಸು ಕಂಡವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಆ ಬಗ್ಗೆ ತರಬೇತಿ ನೀಡುವುದು ಈ ಸಂಸ್ಥೆಯ ಉದ್ದೇಶ.
6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ಈ ಸಂಸ್ಥೆ `ಶ್ರದ್ಧಾ-ಮೇಧಾ’ ಪ್ರವೇಶ ಪರೀಕ್ಷೆ ಆಯೋಜಿಸಿದೆ. ಐಎಎಸ್ ತರಗತಿಗೆ ಹಾಜರಾಗಲು ಪೂರ್ವ ಪರೀಕ್ಷೆ ಇದಾಗಿದ್ದು, ಅಗಷ್ಟ 10ರಂದು ಪರೀಕ್ಷೆ ನಡೆಯಲಿದೆ. ಶಿರಸಿಯ ಎಂಇಎಸ್ ಕಾಮರ್ಸ ಕಾಲೇಜಿನಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಈ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿದ ಮಕ್ಕಳು ತರಗತಿ ಪ್ರವೇಶಕ್ಕೆ ಅರ್ಹತೆಪಡೆಯಲಿದ್ದಾರೆ.
ನಾಗರಿಗ ಸೇವಾ ಪರೀಕ್ಷೆಗಳಿಗೆ ಅಗತ್ಯವಿರುವ ಮಾನಸಿಕ, ಬೌದ್ಧಿಕ ಸಾಮರ್ಥ್ಯಗಳ ಬೆಳವಣಿಗೆಗೆ ಅಗತ್ಯ ಕೌಶಲ್ಯ ಒದಗಿಸುವುದು `ಸಮುತ್ಕರ್ಷ’ ಸಂಸ್ಥೆಯ ಗುರಿ. ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳ ಮೂಲಕ ಶಾಲಾ ಹಂತದಲ್ಲಿ ಮಕ್ಕಳನ್ನು ಸದೃಢವನ್ನಾಗಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಉನ್ನತ ಭವಿಷ್ಯಕ್ಕೆ ಬಾಲ್ಯದಲ್ಲಿಯೇ ಅಡಿಪಾಯ ಹಾಕುವುದಕ್ಕಾಗಿ ಹಲವು ಬಗೆಯ ಯೋಜನೆಗಳನ್ನು ಈ ಸಂಸ್ಥೆ ಕಾರ್ಯರೂಪಕ್ಕೆ ತಂದಿದೆ.
`ಸದ್ಯ ಶ್ರದ್ಧಾ-ಮೇಧಾ ಪರೀಕ್ಷೆಯಲ್ಲಿ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಮೊದಲು ನೋಂದಣಿ ಪ್ರಕ್ರಿಯೆ ಮುಗಿಸಬೇಕು. 100ರೂ ಪರೀಕ್ಷಾ ಶುಲ್ಕ ಪಾವತಿಸಬೇಕು. ಮಾಹಿತಿಗಾಗಿ https://samutkarshias.in/ ವೆಬ್ಸೈಟ್ ನೋಡಬೇಕು. ಇನ್ನೂ ಗೊಂದಲವಿದ್ದರೆ 9845044860 ಸಂಖ್ಯೆಗೆ ಕರೆ ಮಾಡಬೇಕು’ ಎಂದು ಸಂಸ್ಥೆಯ ಡೈರೆಕ್ಟರ್ ಜನರಲ್ ಅನ್ನಪೂರ್ಣ ಹಂಪಿಹೊಳಿ ಹೇಳಿದ್ದಾರೆ.
