ಮೇಷ ರಾಶಿ: ನಿಮ್ಮ ಈ ದಿನ ಕಠಿಣ ಶ್ರಮಕ್ಕೆ ಭವಿಷ್ಯದಲ್ಲಿ ಲಾಭ ಸಿಗಲಿದೆ. ಆರೋಗ್ಯದಲ್ಲಿ ಏರುಪೇರು ಸಹಜ. ಅಗತ್ಯವಿದ್ದಾಗ ವಿಶ್ರಾಂತಿಪಡೆಯಿರಿ.ಉದ್ಯೋಗ ಬದಲಾವಣೆ ತಾತ್ಕಾಲಿಕ ಪರಿಹಾರ ಮಾತ್ರ. ಪ್ರಯಾಣದಿಂದ ಸಂತೋಷ ಸಾಧ್ಯ.
ವೃಷಭ ರಾಶಿ: ಪ್ರೇಮ ವಿಷಯದಲ್ಲಿ ಸಂಕಷ್ಟ ಸಾಧ್ಯತೆ. ಮಾತುಕಥೆ ಮೂಲಕ ಪ್ರೀತಿ ಕಾಪಾಡಿಕೊಳ್ಳಿ. ಸರ್ಕಾರಿ ಉದ್ಯೋಗದವರಿಗೆ ಹೊಸ ಅವಕಾಶ ಸಿಗಲಿದೆ. ಹಣಕಾಸು ಅಭಿವೃದ್ಧಿ ಆಗಲಿದೆ.
ಮಿಥುನ ರಾಶಿ: ಹಿಂದಿನ ಅನುಭವಗಳ ಆಧಾರದಲ್ಲಿ ಈ ದಿನ ಮುಖ್ಯ ನಿರ್ಧಾರ ತೆಗೆದುಕೊಳ್ಳುವಿರಿ. ವೈಯಕ್ತಿಕ ಜೀವನ ಉನ್ನತಿ ಸಾಧ್ಯ. ಹಣಕಾಸು ವಿಷಯದಲ್ಲಿ ಲಾಭವಾಗಲಿದೆ.
ಕರ್ಕ ರಾಶಿ: ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಸ್ವಯಂ ವೈದ್ಯಕೀಯ ಪದ್ಧತಿ ಅನುಸರಿಸದಿರಿ. ಆರೋಗ್ಯದಲ್ಲಿ ವ್ಯತ್ಯಾಸವಾದರೆ ವೈದ್ಯರನ್ನು ಭೇಟಿ ಮಾಡಿ. ಈ ದಿನ ನೀವು ಮೋಸ ಹೋಗುವ ಸಾಧ್ಯತೆಗಳಿವೆ.
ಸಿಂಹ ರಾಶಿ: ಕಷ್ಟ ಪರಿಹಾರ ಲಕ್ಷಣಗಳಿದೆ. ಈ ದಿನದ ನಿರ್ಧಾರ ಜೀವಮಾನವಿಡೀ ಪರಿಣಾಮ ಬೀರಬಹುದು. ಮಾತಿನಲ್ಲಿ ಹಿಡಿತವಿರಲಿ. ಕೋಪವನ್ನು ನಿಯಂತ್ರಿಸಿ.
ಕನ್ಯಾ ರಾಶಿ: ಹಳೆ ಸ್ನೇಹಿತರ ಭೇಟಿ ಸಾಧ್ಯ. ಹಣಕಾಸು ಬೆಳವಣಿಗೆ ಉತ್ತಮ. ಆರೋಗ್ಯದಲ್ಲಿ ಕೊಂಚ ಸಮಸ್ಯೆ ಕಾಡಬಹುದು. ಕಾನೂನು ವ್ಯವಹಾರದಲ್ಲಿ ಗೆಲುವು ಸಾಧ್ಯತೆ.
ತುಲಾ ರಾಶಿ: ನಿಮ್ಮನ್ನು ಹಂಗಿಸುವವರನ್ನು ನಿರ್ಲಕ್ಷಿಸಿ. ಒಂಟಿತನ ದೊಡ್ಡ ಸವಾಲಾಗಬಹುದು. ಪ್ರವಾಸ ನಿಮಗೆ ಆಹ್ಲಾದಕರ ಅನುಭವ ನೀಡಲಿದೆ.
ವೃಶ್ಚಿಕ ರಾಶಿ: ಆರೋಗ್ಯದ ಕಡೆ ಗಮನಕೊಡಿ. ಪ್ರೇಮ ಸಂಬAಧ ಗಟ್ಟಿ ಆಗಲಿದೆ. ವಿದ್ಯಾರ್ಥಿಗಳ ಅಧ್ಯಯನಕ್ಕೆ ಸೂಕ್ತ ದಿನ. ಹಣಕಾಸು ಸಮಸ್ಯೆಗೆ ಪರಿಚಿತರ ನೆರವು ಅಗತ್ಯ.
ಧನು ರಾಶಿ: ಸಕಾರಾತ್ಮಕ ಚಿಂತನೆಯೇ ನಿಮಗೆ ಶಕ್ತಿ. ಈ ದಿನದ ಶ್ರಮಕ್ಕೆ ಮುಂದೆ ಯಶಸ್ಸು ಖಚಿತ. ಧೈರ್ಯದಿಂದ ಜೀವಿಸಿ
ಮಕರ ರಾಶಿ: ಈ ದಿನ ವಾಹನ ಚಲಾಯಿಸುವುದು ಸೂಕ್ತವಲ್ಲ. ಆತುರಗಳಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ. ಅವಿವಾಹಿತರಿಗೆ ಹೊಸ ಅವಕಾಶ ಸಿಗಲಿದೆ.
ಕುಂಭ ರಾಶಿ: ಬದಲಾವಣೆ ಒಪ್ಪಿದರೆ ಬದುಕು ಸುಲಭ. ಹಣ ಅಧಿಕವಾಗಿ ಹೆಚ್ಚಾಗಲಿದೆ. ತಾಳ್ಮೆ ಕಳೆದುಕೊಳ್ಳಬೇಡಿ.
ಮೀನ ರಾಶಿ: ದೀರ್ಘಕಾಲದ ಹೂಡಿಕೆ ಬಗ್ಗೆ ಯೋಚಿಸಿ, ಹೂಡಿಕೆ ಮಾಡಿ. ವೃತ್ತಿಯ ಬದಲಾವಣೆ ಬಗ್ಗೆ ಪುನರ್ ವಿಮರ್ಶೆ ಅಗತ್ಯ. ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು.
