ಧರ್ಮಸ್ಥಳ ಸಂಘದ ಜೊತೆ ಮೈಕ್ರೋಫೈನಾನ್ಸಿನಲ್ಲಿ ಸಹ ಸಾಲ ಮಾಡಿದ್ದ ಶಿರಸಿಯ ಕಾಲೇಜು ಉದ್ಯೋಗಿಯೊಬ್ಬರು ಕಳೆನಾಶಕ ಸೇವಿಸಿ ಸಾವನಪ್ಪಿದ್ದಾರೆ. ಇದರಿಂದ ಅವರ ಸಾಲದ ಹೊರೆ ಮಾತ್ರ ಕಡಿಮೆ ಆಗಿಲ್ಲ.
ಶಿರಸಿ ಎಕ್ಕಂಬಿ ಬಳಿಯ ಶಾಂತಿನಗರದ ಶಶಿಕಲಾ ತಿಳವಳ್ಳಿ ಅವರು ಮುಸ್ಲಿಂ ಗಲ್ಲಿಯ ಇಕ್ರಾ ಕಾಲೇಜಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರು 4 ಲಕ್ಷ ರೂ ಸಾಲ ಮಾಡಿದ್ದರು. ಸಾಲ ತೀರಿಸಲಾಗದ ತಲೆಬಿಸಿಯಲ್ಲಿದ್ದ ಅವರು ಅಗಸ್ಟ 6ರಂದು ಮನೆಯಲ್ಲಿದ್ದ ಕಳೆನಾಶಕ ಸೇವಿಸಿದರು.
ಅದಾದ ನಂತರ ಶಶಿಕಲಾ ತಿಳವಳ್ಳಿ ಅವರು ಎರಡು ಬಾರಿ ವಾಂತಿ ಮಾಡಿದನ್ನು ಕುಟುಂಬದವರು ನೋಡಿದರು. ತಕ್ಷಣ ಅವರ ಪತಿ ಕೃಷ್ಣ ತಿಳವಳ್ಳಿ ಹಾಗೂ ಮಗ ದರ್ಶನ್ ತಿಳುವಳಿ ಖಾಸಗಿ ವಾಹನದ ಮೂಲಕ ಪಂಡಿತ್ ಆಸ್ಪತ್ರೆಗೆ ಕರೆ ತಂದರು. ಅಲ್ಲಿನ ವೈದ್ಯರು ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದು, ವಿಷ ಕುಡಿದ ಮಹಿಳೆಯನ್ನು ಮನೆಯವರು ಟಿಎಸ್ಎಸ್ ಆಸ್ಪತ್ರೆ ಸೇರಿಸಿದರು.
ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅವರನ್ನು ಟಿಎಸ್ಎಸ್ ಆಸ್ಪತ್ರೆಗೆ ಸೇರಿಸಿದರೂ ಅಲ್ಲಿ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಂಜೆ ಅವರು ಸಾವನಪ್ಪಿದ್ದು, ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.
