ಯಲ್ಲಾಪುರದ ಉಮ್ಮಚ್ಗಿಯಲ್ಲಿ ಚಿಕನ್ ಅಂಗಡಿ ನಡೆಸುತ್ತಿದ್ದ ರವಿ ನಾಯ್ಕ ಅವರು ಸೋಮವಾರ ಅಪಘಾತದಲ್ಲಿ ಸಾವನಪ್ಪಿದ್ದಾರೆ.
ಉಮ್ಮಚ್ಗಿ ಬಳಿಯ ಭರಣಿ ಮೂಲದ ರವಿ ನಾಯ್ಕ (25) ಅವರು ಸೋಮವಾರ ಬೈಕ್ ಮೇಲೆ ಚಲಿಸುತ್ತಿದ್ದರು. ಸ್ಥಳೀಯವಾಗಿ ಸತ್ಯನಾರಾಯಣ ಎಂಬ ಹೆಸರಿನಿಂದಲೂ ಅವರು ಗುರುತಿಸಿಕೊಂಡಿದ್ದರು. ಉಮ್ಮಚ್ಗಿ ಬಳಿ ಅವರು ಚಿಕನ್ ಅಂಗಡಿ ನಡೆಸುತ್ತಿದ್ದರು.
ರವಿ@ಸತ್ಯನಾರಾಯಣ ಅವರು ಸೋಮವಾರ ಉಮ್ಮಚ್ಗಿಯಿಂದ ಭರಣಿ ಕಡೆ ಬೈಕು ಓಡಿಸುತ್ತಿದ್ದರು. ಆ ಬೈಕಿನಲ್ಲಿ ಕುಂದರಗಿ ಜಡ್ಡಿಗದ್ದೆಯ ಶಶಿಧರ ಸಿದ್ದಿ ಸಹ ಇದ್ದರು. ಸುಂಕದ ಗುಂಡಿ ಕ್ರಾಸಿನ ಬಳಿ ಗ್ಯಾಸ್ ಸರಬರಾಜು ವಾಹನಕ್ಕೆ ಅವರ ಬೈಕ್ ಹಿಂದಿನಿoದ ಗುದ್ದಿತು. ಗುದ್ದಿದ ರಭಸಕ್ಕೆ ರವಿ ನಾಯ್ಕ ಅವರು ಗಾಯಗೊಂಡು ಸಾವನಪ್ಪಿದರು.
ಬುಲೆರೋ ವಾಹನದ ಚಾಲಕ ಉಚಗೇರಿಯ ಅನಂತ ಮಡಿವಾಳ ಅವರು ರಸ್ತೆ ಪಕ್ಕ ನಿಲ್ಲಿಸಿದ ಗ್ಯಾಸ್ ವಾಹನ ಪಾರ್ಕಿಂಗ್ ಸೂಚನೆ ನೀಡಿರಲಿಲ್ಲ. ಅಪಾಯಕಾರಿ ಸ್ಥಳದಲ್ಲಿ ಅಪಾಯಕಾರಿ ರೀತಿಯಲ್ಲಿ ಗ್ಯಾಸ್ ವಾಹನ ನಿಲ್ಲಿಸಿದ ಬಗ್ಗೆ ಮಾಹಿತಿಯಿದೆ. ಬೈಕ್ ಸಹ ವೇಗವಾಗಿ ಚಲಿಸಿದ್ದರಿಂದ ಈ ಅಪಘಾತ ನಡೆದಿದೆ.
ಬೈಕಿನಿಂದ ಹಿಂದೆ ಕೂತಿದ್ದ ಶಶಿಧರ ಸಿದ್ದಿ ಅವರು ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳ ಭೇಟಿ ನಡೆಸಿದ್ದು, ಗಾಯಗೊಂಡ ಶಶೀಧರ ಸಿದ್ದಿ ಅವರು ಅಪಘಾತದ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ಯಲ್ಲಾಪುರ ಪಿಐ ರಮೇಶ ಹಾನಾಪುರ, ಪಿಎಸ್ಐ ಸಿದ್ದಪ್ಪ ಗುಡಿ ಸ್ಥಳ ಭೇಟಿ ಮಾಡಿದ್ದಾರೆ.
